ನಮ್ಮ ಚೇಳೂರು ತಾಲೂಕಿನಲ್ಲೇ ಒಳ್ಳೆಯ ಹೆಸರು ಗಳಿಸಿ ಸುಮಾರು ವರ್ಷಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸುಮಾರು ರೋಗಿಗಳಿಗೆ ದೇವರಂತೆ ಭಾವನೆ ಮೂಡಿಸಿದಂತಹ ವ್ಯಕ್ತಿ ತನ್ನ ವೃತ್ತಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಒಳ್ಳೆಯ ಹೆಸರನ್ನು ಗಳಿಸಿದ ಮತ್ತು ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೂಡ ಒಳ್ಳೆಯ ಸೇವೆ ಸಲ್ಲಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮವಾದ ಸೇವೆ ಸಲ್ಲಿಸಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಡಾಕ್ಟರ್ ಎಂದು ಹೆಸರು ಪಡೆದು ನಿವೃತ್ತಿ ಹೊಂದಿ ಜನಮನ ಗೆದ್ದ ಡಾಕ್ಟರ್ ಆದ ರಾಜಾ ರೆಡ್ಡಿ ರವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ 12:10ಕ್ಕೆ ದೈವಾಧೀನರಾಗಿರುತ್ತಾರೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ ಇವರು ಪತ್ನಿ ಹಾಗೂ ಒಬ್ಬ ಪುತ್ರ ಒಬ್ಬ ಪುತ್ರಿಯರನ್ನು ಅಗಲಿರುತ್ತಾರೆ ಮತ್ತು ಸಮಾಜಕ್ಕೆ ಕೊಡುಗೆಯಾಗಿ ಮಗ ಮತ್ತು ಸೊಸೆಯನ್ನು ಇಬ್ಬರ ಡಾಕ್ಟರ್ ಗಳನ್ನಾಗಿ ಮಾಡಿ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತ ಇವರ ಪ್ರಮಾಣಿಕ ಪಾರದರ್ಶಕತೆ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿರುತ್ತಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಇವರ ಕುಟುಂಬ ವರ್ಗಕ್ಕೆ ದುಃಖ ತಡೆಯುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥಿಸುವೇ.
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.