LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದೊಡವಾಡ ಗ್ರಾಮ ಪಂಚಾಯತಿಯಲ್ಲಿ VGPP ಗ್ರಾಮ ಸಭೆ ಯಶಸ್ವಿ.

Advertisement

ಮಲ್ಲಮ್ಮನ ಬೆಳವಡಿ :  ಗ್ರಾಮೀಣ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೂಲಿಕಾರರ ಹಕ್ಕುಗಳು ಹಾಗೂ ಜನರ ಸಹಭಾಗಿತ್ವಕ್ಕೆ ಒತ್ತು – ಯೋಜನೆಯ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ ಅಧಿಕಾರಿಗಳು

ದೊಡವಾಡ, ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ VGPP ಗ್ರಾಮ ಸಭೆಯನ್ನು ಆಯೋಜಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ VBGRAMG ಯೋಜನೆಯ ಕುರಿತು ವಿಶೇಷ ಜಾಗೃತಿ ಮೂಡಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ದಯಾನಂದ ಹುಲಮನಿ ಹಾಗೂ IEC ಸಂಯೋಜಕರಾದ.ಎಸ್. ವಿ. ಹಿರೇಮಠ್ ಅವರು VBGRAMG ಯೋಜನೆಯ ಉದ್ದೇಶ, ಅನುಷ್ಠಾನ ವಿಧಾನ, ಗ್ರಾಮೀಣ ಜನರಿಗೆ ದೊರೆಯುವ ಉದ್ಯೋಗಾವಕಾಶಗಳು ಮತ್ತು ಯೋಜನೆಯಡಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮ ಸಭೆಯ ಪಾತ್ರ ಪ್ರಮುಖ

PDO ದಯಾನಂದ ಹುಲಮನಿ ಅವರು ಮಾತನಾಡಿ, ಗ್ರಾಮ ಸಭೆಯು ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸುವ, ಅಭಿವೃದ್ಧಿಯ ಅಗತ್ಯತೆಗಳನ್ನು ಗುರುತಿಸುವ ಹಾಗೂ ಸಾರ್ವಜನಿಕರ ಅಭಿಪ್ರಾಯಗಳಿಗೆ ಆದ್ಯತೆ ನೀಡುವ ಪ್ರಮುಖ ವೇದಿಕೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಗುರುತಿಸಿ, ಅವುಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಗ್ರಾಮಸ್ಥರು ತಮ್ಮ ಸಲಹೆ, ಸೂಚನೆ ಹಾಗೂ ಬೇಡಿಕೆಗಳನ್ನು ಗ್ರಾಮ ಸಭೆಯಲ್ಲಿ ಮಂಡಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಜಲಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಗ್ರಾಮೀಣ ಪ್ರದೇಶದ ಸಮಗ್ರ ಪ್ರಗತಿಗೆ ಜನರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

VBGRAMG ಯೋಜನೆಯ ಕುರಿತು IEC ಸಂಯೋಜಕರಿಂದ ಜಾಗೃತಿ

IEC ಸಂಯೋಜಕರು VBGRAMG (Viksit Bharat – Guarantee for Rozgar and Ajeevika Mission (Gramin)) ಯೋಜನೆಯ ಕುರಿತು ಮಾಹಿತಿ ನೀಡುತ್ತಾ, ಯೋಜನೆಯ ಮುಖ್ಯ ಉದ್ದೇಶಗಳು, ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಆಶಯ, ಕೂಲಿಕಾರರ ಹಕ್ಕುಗಳು, ಕೆಲಸದ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಹಾಗೂ ಯೋಜನೆಯಡಿ ಕೈಗೊಳ್ಳಬಹುದಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಾಮಗಾರಿಗಳು, ಜಲಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಕೆರೆಗಳ ಪುನಶ್ಚೇತನ, ನೀರುಗಾಲುವೆಗಳ ನಿರ್ಮಾಣ ಹಾಗೂ ಗ್ರಾಮೀಣ ಆಸ್ತಿಗಳ ಸೃಜನೆಯಂತಹ ಅಭಿವೃದ್ಧಿ ಕಾರ್ಯಗಳ ಮಹತ್ವವನ್ನು ವಿವರಿಸಿದರು.

ಅಲ್ಲದೆ, ಯೋಜನೆಯ ಕುರಿತು ಪ್ರತಿಯೊಬ್ಬ ಗ್ರಾಮಸ್ಥರು ಅರಿವು ಹೊಂದುವುದು ಅವಶ್ಯಕವಾಗಿದ್ದು, ಉದ್ಯೋಗದ ಅಗತ್ಯವಿರುವ ಕೂಲಿಕಾರರು ಗ್ರಾಮ ಪಂಚಾಯತಿಗೆ ಕೆಲಸದ ಬೇಡಿಕೆ ಸಲ್ಲಿಸಬೇಕು. ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾಮಗಾರಿಗಳನ್ನು ಗುರುತಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ಕೂಲಿಕಾರರು ಹಾಗೂ ಕಾಯಕ ಬಂಧುಗಳಿಗೆ ಯೋಜನೆಯ ಮಹತ್ವದ ಅರಿವು

ಸಭೆಯಲ್ಲಿ ಭಾಗವಹಿಸಿದ್ದ ಕಾಯಕ ಬಂಧುಗಳು ಹಾಗೂ ಕೂಲಿಕಾರರಿಗೆ ಯೋಜನೆಯ ಉದ್ದೇಶ ಮತ್ತು ಅನುಷ್ಠಾನದ ಕುರಿತು ಮಾಹಿತಿ ನೀಡಲಾಯಿತು. ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸುವುದು, ಯೋಜನೆಯ ಸೌಲಭ್ಯಗಳನ್ನು ಅರ್ಹರು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸುವುದು ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಕುರಿತು ಚರ್ಚಿಸಲಾಯಿತು.

ಗ್ರಾಮದ ಅಭಿವೃದ್ಧಿ ಕೇವಲ ಪಂಚಾಯತಿ ಆಡಳಿತದ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬ ಗ್ರಾಮಸ್ಥರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬ ಸಂದೇಶವನ್ನು ಸಭೆಯ ಮೂಲಕ ಸಾರಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಸಿಬ್ಬಂದಿ:

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂಗೀತಾ ಚಂದರಗಿ, ಉಪಾಧ್ಯಕ್ಷರಾದ ಸಾವಿತ್ರಿ ಹಳ್ಳದ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಯಾನಂದ ಹುಲಮನಿ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ಅಕ್ಕಿ, ಮಹೇಶ್, ಕೇಸನವರ, ರಜಿಯಾ ಮುಜಾವರ, ಶಿವಲಿಂಗವ್ವ ಬಶೆಟ್ಟಿ, ಮಹಾಂತೇಶ್ ಅಶುಂಡಿ, ರಮೇಶ್ ಸಪ್ಪಡ್ಲಿ ಹಾಗೂ ಇತರ ಸದಸ್ಯರು, BFT ಸಿದ್ದಪ್ಪ ಕಂಬಾರ, ಮೈಲಾರ ದೇಗಾಂವಿ, GKM ಲಕ್ಷ್ಮಿ ತೋಟಗಿ, DEO ಶಿವರಾಜ್ ಮಾಡಲಗಿ, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ದುಂಡಪ್ಪ ಹೂಲಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡವಾಡ ಗ್ರಾಮ ಪಂಚಾಯತಿಯಲ್ಲಿ VGPP ಗ್ರಾಮ ಸಭೆ ಯಶಸ್ವಿ.ರೈತರ ಜಮೀನಿಗೆ ಅರಣ್ಯ ಇಲಾಖೆ ಬೇಲಿ! ಜಮೀನಿನಲ್ಲೇ ರೈತರ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ  ಬೃಹತ್ ಪ್ರತಿಭಟನೆ!ಇಂಗ್ಲೆಂಡ್ ಗೆ 8 ವಿಕೆಟ್ ಗಳ ಸುಲಭ ಗೆಲುವು ದ. ಆಪ್ರಿಕಾ ತಂಡಕ್ಕೆ ಮೊದಲ ಇನ್ನಿಂಗ್ಸ್ ನ ದೊಡ್ಡ ಮುನ್ನಡೆ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎಂ.ಎಸ್. ರಾಮಚಂದ್ರ ರಾವ್ ನೇಮಕಕ್ಕೆ ಶಿಫಾರಸುಕೆಲಸ ಕೊಡಿಸಿ, 50 ಸಾವಿರ ಪಡೆಯಿರಿ : ಯುವಕನ ವಿಭಿನ್ನ ಆಫರ್ ವೈರಲ್! ವಿನಯ್ ಕುಲಕರ್ಣಿಗೆ ಜೈಲಾ..? ಬೇಲಾ..? : ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ250 ರನ್ ಗಳ ಗುರಿಯನ್ನು 14.2 ಓವರ್ ಗಳಲ್ಲೇ ತಲುಪಿದ ಭಾರತ ರೈಸಿಂಗ್ ಸ್ಟಾರ್ ತಂಡ ಬಸವ ಮಂಟಪ ಮುಟ್ಟುಗೋಲಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಬಾಗಲಕೋಟೆ ಜಿಲ್ಲೆಯ 9 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ