ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಕರ್ನಾಟಕ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದ ನೂತನ ಸಚಿವರ ಪಟ್ಟಿಯಲ್ಲಿ ಇವರ ಹೆಸರಿದ್ದು ಆಗಸ್ಟ್ 3 2026 ರಂದು ಇವರ ಸಂಪುಟ ಪ್ರವೇಶ ಅಧಿಕೃತಗೊಂಡಿದೆ
ಬಾಗಲಕೋಟೆ : ಜಿಲ್ಲೆಯ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮೊದಲ ಬಾರಿಗೆ ಸಚಿವರಾಗಿ ಸೋಮವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.
ಎರಡನೇ ಬಾರಿಗೆ ಶಾಸಕರಾಗಿದ್ದಾರೆ 2008ರಲ್ಲಿ ಮೊದಲ ಬಾರಿಗೆ ಹುನಗುಂದ ಕ್ಷೇತ್ರದಿಂದ ಸ್ಪರ್ಧಿಸುವ ವಿಜಯಾನಂದ ಕಾಶಪ್ಪನವರ ಸೋಲುತ್ತಾರೆ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ 2018ರ ಚುನಾವಣೆಯಲ್ಲಿ ಮತ್ತೇ ಸೋಲುವ 2023ರ ಚುನಾವಣೆಯಲ್ಲಿ 30 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜಯಾನಂದ ಕಾಶಪ್ಪನವರ ತಂದೆ ಎಸ್ ಆರ್ ಕಾಶಪ್ಪನವರ 1985ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಹುನುಗುಂದ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುತ್ತಾರೆ ನಂತರ 1989, 94, 99ರಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ವಿಜಯ ದಾಖಲಿಸುತ್ತಾರೆ ಎಸ್ ಎಂ ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರೂ ಆಗಿದ್ದರು.
2003ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬಳಿ ನಡೆಯುವ ರಸ್ತೆ ಅಪಘಾತದಲ್ಲಿ ಎಸ್ ಆರ್ ಕಾಶಪ್ಪನವರ ನಿಧನರಾಗುತ್ತಾರೆ ಉಪ ಚುನಾವಣೆಯಲ್ಲಿ ಅವರ ಪತ್ನಿ ಗೌರಮ್ಮ ಕಾಶಪ್ಪನವರಿಗೆ ಟಿಕೆಟ್ ನೀಡಲಾಗುತ್ತದೆ ಅವರು ಗೆಲುವು ಸಾಧಿಸಿ ವಿಧಾನಸೌಧದ ಪ್ರವೇಶಿಸುತ್ತಾರೆ. 2004ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಗೌರಮ್ಮ ಕಾಶಪ್ಪನವರ ಸ್ಪರ್ಧಿಸಿ ಸೋಲುತ್ತಾರೆ 2008ರಲ್ಲಿ ಗೌರಮ್ಮ ಅವರನ್ನು ಬಿಟ್ಟು ಪಕ್ಷವು ಅವರ ಪುತ್ರ ವಿಜಯಾನಂದ ಕಾಶಪ್ಪನವರಿಗೆ ಟಿಕೆಟ್ ನೀಡುತ್ತದೆ.
ವರದಿ : ಬಸವರಾಜ ಪೂಜಾರಿ


