Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೇಡಕಿಹಾಳದಲ್ಲಿ ಡೊಳ್ಳುವಾದ್ಯದೊಂದಿಗೆ ಬಂಗಾರದ ಒಡೆಯ ವಿಠ್ಠಲ ಬೀರದೇವರ ವಿಶಾಳಿಜಾತ್ರೆ ಸಂಪನ್ನ

Advertisement
ನಿಪ್ಪಾಣಿ : ಹಾಲುಮತ ಸಮಾಜವೆಂದರೆ ಬೀರದೇವರ ಅಪರಿಮಿತ ಭಕ್ತ ಸಾಗರವೇ ಹೌದು. ಭಂಡಾರದ ಒಡೆಯನನ್ನು ಹೆಗಲ ಮೇಲೆ ಹೊತ್ತು ನರ್ತಿಸುತ್ತ ಭಂಡಾರ ಎರಚುತ್ತ ಕೈಯಲ್ಲಿ ಕತ್ತಿ ಹಿಡಿದು, ಭವಿಷ್ಯ ವಾಣಿ ನುಡಿಯುವ ಪರಂಪರೆ ಮುನ್ನಡೆಸುವುದರೊಂದಿಗೆ, ಭಕ್ತಿಯ ಪರಾಕಾಷ್ಟೆ ಮೆರೆಯುವ ಪರಂಪರೆ. ಹಾಗಾದರೆ ಬನ್ನಿ ವೀಕ್ಷಕರೇ ನಿಪ್ಪಾಣಿ ತಾಲೂಕಿನ ಬೇಡಕಿ ಹಾಳ ಹಾಗೂ ಚಾಂದಶಿರದವಾಡ ಗ್ರಾಮಗಳ ಹಾಲುಮತ ಸಮಾಜದ ಆರಾಧ್ಯ ದೇವರುವಿಠ್ಠಲ ಬೀರದೇವ ಹಾಗೂ ಮಹಾಲಕ್ಷ್ಮಿದೇವಿಯ ವಿಶಾಳಿ ಅಮಾವಾಸ್ಯೆಯಂದು ರವಿವಾರ ದೂದಗಂಗಾ ನದಿ ದಡದಲ್ಲಿ ದೇವರ ಸ್ನಾನ, ಭೆಟ್ಟಿ ಹಾಗೂ ಪಲ್ಲಕ್ಕಿ ಉತ್ಸವ ನೋಡುಗರ ಕನ್ಮನ ಸೆಳೆದಿದ್ದು ಬಿವಿ 5 ನ್ಯೂಸ್ ಕನ್ನಡ ವಾಹಿನಿಯ ವರದಿಗಾರರು ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ನಾವು ತೋರಿಸ್ತಿವಿ ನೋಡಿ ........ ವಿಡಿಯೋ ಪ್ಲೇ ಮಾಡಿ..... ರವಿವಾರ ಬೆಳಗಿನ ಜಾವ ರಾಮನಗರದಲ್ಲಿಯ ಮಂದಿರದಲ್ಲಿ ದೇವಋಷಿ ನಾಗಪ್ಪ ಕೋರೆ ಮಾಯಪ್ಪ ಕೋರೆ ಹಾಗೂ ವಿಠ್ಠಲ್ ಕೋರೆಯವರ ಹಸ್ತದಿಂದ ಅಭಿಷೇಕ ಪೂಜೆ ನಡೆಯಿತು.

ತದನಂತರ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಪಲ್ಲಕ್ಕಿ ದೂದಗಂಗಾ ನದಿ ಕಟ್ಟಿಗೆ ತಲುಪುತ್ತಿದ್ದಂತೆ ಭಕ್ತರ ವತಿಯಿಂದ ದೇವರ ಸ್ನಾನ ಪಾದಪೂಜೆ ಹಾಗೂ ಆರತಿ ಮುಗಿಯುತ್ತಿದ್ದಂತೆ ಕಾಶಿ ಲಿಂಗ ದೇವರು, ವಿಟ್ಟಲ ಬೀರ ದೇವರು ಹಾಗೂ ಮಹಾಲಕ್ಷ್ಮಿ ಹೆಸರಿಗೆ ಚಾಂಗಬಲೋ ಎನ್ನುತ್ತಾ ಭಂಡಾರ ಹಾರಿಸಿ ಪಲ್ಲಕ್ಕಿ ಎತ್ತಿ ಹಿಡಿದು ನೃತ್ಯದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಇದೇ ವೇಳೆ ಚಾಂದ ಶಿರದವಾಡ ಗ್ರಾಮದ ಮಹಾಲಕ್ಷ್ಮಿ ದೇವರ ಪಲ್ಲಕ್ಕಿಗಳು ಆಗಮಿಸಿ ಭೆ ಟ್ಟಿಯಾಗಿ ಉತ್ಸವದಲ್ಲಿ ಪಾಲ್ಗೊಂಡವು.ಉತ್ಸವದ ನಂತರ ಮಹಾಪ್ರಸಾದ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ಮಮದಾಪುರದ ಬಾಳಾ ಸಾಹೇಬ ಕದಂ, ಚಂದ್ರಕಾಂತ ಡೋನೆ ಅಶೋಕ್ ಘಾಟಗೆ ಜನಗೊಂಡ ಪಾಟೀಲ್ ಮಾಳುಕೋರೆ ಸೇರಿದಂತೆ ಬೇಡಕೀಹಾಳ ಶಿರದವಾಡ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವರದಿ : ಮಹಾವೀರ ಚಿಂಚಣೆ 
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ