ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಕಾರ್ಣಿಕ ನುಡಿ ಹೀಗಿದೆ.12 ಅಡಿ ಎತ್ತರದ ಬಿಲ್ಲೇರಿ ಗೊರವಯ್ಯ ಹನುಮನಗೌಡ ಗುರೇಗೌಡರ ಕಾರ್ಣಿಕ ನುಡಿದ್ದಿದು,ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಎಂದು ದೈವವಾಣಿ ನುಡಿದಿದ್ದಾರೆ.ಇದರ ಅರ್ಥ, ಪ್ರಸಕ್ತ ಈ ವರ್ಷ ನಮ್ಮ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಹೀಗಾಗಿ ಸಮೃದ್ಧವಾಗಿ ಬೆಳೆಗಳು ಬರಲಿವೆ ಎಂದು ಗ್ರಾಮಸ್ಥರು ಈ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದಾರೆ

