ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾ ಶಾಲೆಯಲ್ಲಿ ನಡೆದ ಐತಿಹಾಸಿಕ ವೇದಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಬೆಂಬಲ ಕೋರಿದ್ದಾರೆ.
ಕರ್ನಾಟಕವನ್ನು ಬೆಳೆಸಲು ಮತ್ತು ರಕ್ಷಿಸಲು ನಮಗೆ ನಿಮ್ಮ ಸಹಕಾರ ಅತ್ಯಗತ್ಯ" ಎಂದು ಪ್ರಧಾನಿ ಮೋದಿಯವರಲ್ಲಿ ಡಿಕೆಶಿ ಮುಕ್ತವಾಗಿ ಮನವಿ ಮಾಡಿಕೊಂಡರು.
ದೇಶದ ವಿಕಾಸಕ್ಕೆ ಕರ್ನಾಟಕದ ಪಾತ್ರ ಪ್ರಮುಖ: ಸಿಎಂ ಪ್ರತಿಪಾದನೆ
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಕರ್ನಾಟಕವು ಇಡೀ ದೇಶದಲ್ಲೇ ಅತ್ಯಂತ ಪ್ರಮುಖ ಹಾಗೂ ಗಮನಾರ್ಹ ರಾಜ್ಯವಾಗಿದೆ. ಇಲ್ಲಿನ ನೈಸರ್ಗಿಕ ವಾತಾವರಣ, ಶ್ರೀಮಂತ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಇಡೀ ದೇಶವೇ ವೀಕ್ಷಿಸುತ್ತಿದೆ.
ಇದು ಕೇವಲ ರಾಜ್ಯವಲ್ಲ, ಒಂದು ಶ್ರೇಷ್ಠ 'ಸಂಕಲ್ಪ ಭೂಮಿ'. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಹೆಜ್ಜೆ ಇಟ್ಟರೆ ಮಾತ್ರ ಭಾರತದೊಂದಿಗೆ ಕರ್ನಾಟಕವೂ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ" ಎಂದರು.


