Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ನಿ ಅಗಲಿಕೆ ನೋವು: ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Advertisement
ದಾವಣಗೆರೆ: ವ್ಯಕ್ತಿಯೋರ್ವ ತನ್ನ ಪತ್ನಿಯ ಅಗಲಿಕೆಯ ನೋವಿನಿಂದ ಹೊರಬರಲಾಗದೆ, ತನ್ನಿಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಉದಯ್​ (35), ಮಕ್ಕಳಾದ ಸಿಂಧುಶ್ರೀ (06) ಹಾಗೂ ಶ್ರೀಜಯ್ (04) ಮೃತಪಟ್ಟವರು.

ಎಸ್​ಪಿಎಸ್​ ನಗರದ ಉದಯ್​ ರಾಣೇಬೆನ್ನೂರು ಮೂಲದ ಹೇಮಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಪತ್ನಿ ಹೇಮಾ ಅನಾರೋಗ್ಯಕ್ಕೆ ಒಳಗಾಗಿ 8 ತಿಂಗಳ ಹಿಂದೆ ಸಾವನ್ನಪ್ಪಿದ್ದರು.

ಈ ಬೇಸರದಿಂದ ಹೊರಬರಲಾರದ ಪತಿ ಉದಯ್​ ಮಕ್ಕಳನ್ನು ಕರೆದುಕೊಂಡು ಆಗಾಗ ಪತ್ನಿ ಸಮಾಧಿ ಬಳಿ ತೆರಳುತ್ತಿದ್ದರು. ಮನೆಯವರು ಎಷ್ಟೇ ಬುದ್ದಿ ಹೇಳಿದರೂ ಸರಿಹೋಗದ ಉದಯ್​ ನಿನ್ನೆ ಕೆಲಸಕ್ಕೂ ತೆರಳದೆ ಸಂಜೆ ವೇಳೆ ಇಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.

ಸಹೋದರ ಹೇಳಿದ್ದೇನು?: ''ನಾನು ಸತ್ತರೆ ಜೊತೆಗೆ ಮಕ್ಕಳನ್ನು ಕರೆತರುವೆ ಎಂದು ಉದಯ್ ಪದೇ ಪದೇ ಎನ್ನುತ್ತಿದ್ದ" ಎಂದು ಆತನ​ ಸಹೋದರ ಅಶೋಕ್ ತಿಳಿಸಿದ್ದಾರೆ. "ಉದಯ್ ಪತ್ನಿ ಹೇಮಾ ಅನಾರೋಗ್ಯದಿಂದ ಸಾವನಪ್ಪಿದ್ದರು. ಅದೇ ನೆನಪಿನಲ್ಲಿ ಉದಯ್ ಖಿನ್ನತೆಗೆ ಒಳಗಾಗಿದ್ದ. ಈಗ ತನ್ನ ಮಕ್ಕನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ದುರಂತ. ಪದೇ ಪದೇ ಮೃತ‌ ಹೆಂಡತಿ ಹೇಮಾ ಸಮಾಧಿ ಬಳಿ ಮಕ್ಕಳನ್ನು ಕರೆದೊಯ್ಯುತ್ತಿದ್ದ. ಅವನಿಗೆ ಬುದ್ಧಿವಾದ ಹೇಳಿದ್ದರೂ ಈ ರೀತಿ ಮಾಡಿಕೊಂಡಿದ್ದಾನೆ" ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಮೃತ ಉದಯ್​ ತಾಯಿ ಕಲಾವತಿ ಮಾತನಾಡಿ, "ಹೆಂಡತಿಯ ಸಾವಿನಿಂದ ಬೇಸರಗೊಂಡಿದ್ದ. ರಾತ್ರಿ ಹೇಳದೆ, ಕೇಳದೆ ಎಲ್ಲೋ ಹೋಗಿದ್ದವನನ್ನು ಹುಡುಕಿ ಕರೆತಂದಿದ್ದೆವು. ಬೆಳಗ್ಗೆ ಮಲಗುತ್ತೇನೆ‌ ಎಂದು ಹೇಳಿ ಮಕ್ಕಳೊಂದಿಗೆ ಹೀಗೆ ಮಾಡಿಕೊಂಡಿದ್ದಾನೆ. ಮಕ್ಕಳನ್ನು ನೋಡಿದರೆ ಬಹಳ ಬೇಸರ ಆಗುತ್ತಿದೆ" ಎಂದು ದುಃಖ ವ್ಯಕ್ತಪಡಿಸಿದರು. ಈ ಬಗ್ಗೆ ಗಾಂಧಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್​​ಪಿ ಉಮಾಪ್ರಶಾಂತ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ