Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಲೈಂಗಿಕ ಸ್ವಾಯುತ್ತತ್ತೆಯನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ: ತಮಿಳುನಾಡು ಹೈಕೋರ್ಟ್

Advertisement
ಮಧುರೈ (ತಮಿಳುನಾಡು): ಪತ್ನಿ ಅಶ್ಲೀಲ ಚಿತ್ರ ವೀಕ್ಷಿಸುತ್ತಾಳೆ. ಹಸ್ತಮೈಥುನಕ್ಕೆ ಒಳಗಾಗುತ್ತಾಳೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಕೋರಿದ್ದ ವ್ಯಕ್ತಿಯ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ಹೈಕೋರ್ಟ್​ ವಜಾ ಮಾಡಿದೆ.

ನ್ಯಾ. ಜಿ ಆರ್​ ಸ್ವಾಮಿನಾಥನ್​ ಮತ್ತು ನ್ಯಾ ಆರ್​ ಪೂರ್ಣಿಮಾ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದ್ದು, ಮಹಿಳಾ ಲೈಂಗಿಕ ಸ್ವಾಯುತ್ತತ್ತೆಯನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲೂ ಇದೇ ರೀತಿಯ ಪುರುಷರ ನಡುವಳಿಕೆಯನ್ನು ಸಮಾಜ ಒಪ್ಪಿದಾಗ, ಮಹಿಳೆಯರಿಗೆ ಇದು ಅಪರಾಧ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದರು.

ಏನಿದು ಪ್ರಕರಣ?: ಕರೂರು ನಿವಾಸಿ, ಪತ್ನಿಯಿಂದ ವಿಚ್ಛೇದನ ಕೋರಿ ಕರೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2018ರ ಜುಲೈನಲ್ಲಿ ಮದುವೆಯಾದ ಈ ದಂಪತಿ 2020ರ ಡಿಸೆಂಬರ್​ನಿಂದ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ.

ನನ್ನ ಹೆಂಡತಿ ಲೈಂಗಿಕ ರೋಗದಿಂದ ಬಳಲುತ್ತಿದ್ದು, ಬ್ಲೂಫಿಲಂ ನೋಡುತ್ತಾಳೆ. ಮನೆಗೆಲಸ ನಿರ್ಲಕ್ಷ್ಯ ಮಾಡುತ್ತಾಳೆ. ಪೋಷಕರನ್ನೂ ಕಡೆಗಣಿಸುತ್ತಿದ್ದು , ಅತಿ ಹೆಚ್ಚಿನ ಸಮಯವನ್ನು ಫೋನ್​ ವೀಕ್ಷಣೆ ಮಾಡುವುದರಲ್ಲೇ ಕಳೆಯುತ್ತಾಳೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಗಂಡ ಹೇಳಿದಂತೆ ಹೆಂಡತಿಯ ಈ ರೋಗದ ಕುರಿತು ಯಾವುದೇ ವೈದ್ಯಕೀಯ ಪುರಾವೆಗಳನ್ನು ಹಾಗೂ ಪೂರಕ ಸಾಕ್ಷ್ಯಗಳನ್ನು ನೀಡುವಲ್ಲಿ ಅವರು ವಿಫಲವಾಗಿದ್ದಾರೆ.

ಈ ಪ್ರಕರಣ ಆಲಿಸಿದ ಪೀಠ, ಹಿಂದೂ ಮದುವೆ ಕಾಯ್ದೆ 1955ರ ಅಡಿ ಆತ್ಮತೃಪ್ತಿ ಅಪರಾಧವಲ್ಲ. ಇದನ್ನು ಕ್ರೂರತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. ಬ್ಲೂಫಿಲ್ಮಂ ನೋಡುವ ಚಟವೂ ಹಾನಿಕಾರಕವಾಗಿದೆ. ಆದರೆ, ಇದನ್ನು ಕಾನೂನಾತ್ಮಕ ವಿಷಯವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಇದನ್ನು ಅಪರಾಧ ಎನ್ನಲು ಸಾಧ್ಯವಿಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ