
ನಂತರ ಮಾತನಾಡಿ ಕಾನೂನು ಎಲ್ಲರಿಗೂ ಒಂದೇ ತೆರನಾಗಿ ಅನ್ವಯವಾಗುತ್ತದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಕಾನೂನು ಚೌಕಟ್ಟಿನಲ್ಲಿ ಜೀವಿಸಬೇಕಾಗಿದ್ದು, ಜನನ ಪ್ರಮಾಣ ಪತ್ರ ಉದ್ಯೋಗ ಮತ್ತು ಇನ್ನಿತರ ಗುರುತಿಗಾಗಿ ಅವಶ್ಯಕವಾಗಿದ್ದು, ಸಂಬಂದಿಸಿದ ಇಲಾಖೆಯಲ್ಲಿ ಪಡೆದಿರಬೇಕು.
ಒಂದು ವೇಳೆ ಸಿಗದಿದ್ದಾಗ ನಮ್ಮ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಮಾತನಾಡಿ ವಿದ್ಯಾರ್ಥಿಗಳಾದ ನೀವು ಇಂದಿನಿಂದಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಬಹುದಾಗಿದೆಂದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಜ್ ಅವರು ಮಾತನಾಡಿ ಸಮಾಜದಲ್ಲಿ ಜಾತಿಯತೆಯನ್ನು ಮೀರಿ ನೆರವಿನ ಹಸ್ತವನ್ನು ಚಾಚಿರುವ ಸುದಾಮೂರ್ತಿ ಅವರಂತೆ ನಾವು ಸಹ ತೊಂದರೆ ಇರುವವರೆಗೆ ಸಹಾಯ ಮಾಡಬೇಕೆಂದು ತಿಳಿಸಿದರು.
ಹಿರಿಯ ವಕೀಲರಾದ ಎನ್.ಅಬ್ದುಲ್‌ಸಾಬ್ ಅವರು ಮಾತನಾಡಿ ಭವ್ಯ ಭಾರತ ಮುಂದಿನ ಪ್ರಜೆಗಳಾಗುವ ನೀವೆಲ್ಲಾ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ದೇಶದ ಕಾನೂನುಗಳನ್ನು ಗೌರವಿಸುತ್ತಾ ನಿಮ್ಮ ಭವಿಷ್ಯದ ಬಗ್ಗೆ ಒಳ್ಳೆಯ ಕನಸುಗಳನ್ನು ಕಾಣಬೇಕೆಂದು ತಿಳಿಸಿದರು.
ಇದೇ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಎಮ್.ಷರೀಪ್‌ಸಾಬ್, ಶಿಕ್ಷಣ ಸಂಯೋಜಕರಾದ ಸುರೇಶ್, ಶಾಲಾ ಮುಖ್ಯೋಪಾದ್ಯಾಯಿನಿ ಲೋರ್ಥ್ ಮೇರಿ, ಆರೋಗ್ಯ ಮೇರಿ, ಪ್ಯಾನಲ್ ವಕೀಲರಾದ ಟಿ.ವೆಂಕಟೇಶ್ ನಾಯ್ಕ್, ಮಲ್ಲಿಗೌಡ, ನೆಲಗುಂಟಯ್ಯ, ಹೆಚ್.ಹುಲುಗಪ್ಪ, ರುದ್ರಮುನಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ

