ಕಲಘಟಗಿ :ಗುಡ್ ನ್ಯೂಸ್ ವೆಲ್ಫೇರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದಿನಾಂಕ :01.08.2026ರಂದು ಎನ್.ಎಸ್.ಎಸ್. ಘಟಕ, ಯುವ ರೆಡ್ ಕ್ರಾಸ್ ಘಟಕ, ಸಮಾಜಶಾಸ್ತ್ರ ವಿಭಾಗ ಹಾಗೂ ಮಕ್ಕಳ ಸಂರಕ್ಷಣಾ ಘಟಕಗಳ ಅಡಿಯಲ್ಲಿ ಶ್ರೀ ಮ. ನಿ. ಪ್ರ. ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ವ್ಯಸನ ಎಂದರೆ ಚಟ ಮಾಡುವಿಕೆ ಇಂದಿನ ದಿನದಲ್ಲಿ ವ್ಯಸನಿಗಳು ಸಾವಿರಾರು ಪ್ರಮಾಣದಲ್ಲಿದ್ದು, ತಂಬಾಕು ಗುಟ್ಕಾ, ಅಫಿಮ್, ಮದ್ಯಪಾನ, ಗಾಂಜಾ, ದೂಮಪಾನ ಮೊದಲಾದ ವ್ಯಸನ ಮಾಡುವುದು ಕಂಡು ಬರುತ್ತದೆ ಇದರಿಂದ ಮಾನವನ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಅಂದರೆ ಕ್ಯಾನ್ಸರ್, ಜೀರ್ಣಾಂಗ ಹಾನಿ, ಟಿಬಿ ರೋಗ, ಮಾನಸಿಕ ಅಸ್ವಸ್ಥತೆ, ಆತ್ಮವಿಶ್ವಾಸದ ಕೊರತೆ, ಸಮಾಜದಿಂದ ದೂರವಿರುವಿಕೆ ಮೊದಲಾದವುಗಳ ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿಸುತ್ತದೆ. ನೈಜ ಘಟನೆಗಳನ್ನು ಹೇಳುವ ಮೂಲಕ ಪ್ರತಿಯೊಬ್ಬರೂ ವ್ಯಸನ ಮುಕ್ತವಾಗಿರಿ ಎಂದು ಸಾರ್ವಜನಿಕ ತಾಲೂಕ ಆರೋಗ್ಯ ಕೇಂದ್ರ ಕಲಘಟಗಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ಎಂ.ಆರ್. ಕುಲಕರ್ಣಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎಂ.ಡಿ.ಹೊರಕೇರಿ ಅವರು ಚಟ ಬಿಟ್ಟು ಆರೋಗ್ಯಕರ ಹವ್ಯಾಸಗಳಾದ ಯೋಗ, ವ್ಯಾಯಾಮ, ಸಾಹಿತ್ಯ, ಕಲೆ ರೂಡಿಸಿಕೊಳ್ಳಿ. ನಾವು ಆರೋಗ್ಯವನ್ನು ಕಾಪಾಡಿಕೊಂಡರೆ, ಆರೋಗ್ಯವು ನಮ್ಮನ್ನು ಕಾಪಾಡಿಕೊಳ್ಳುತ್ತದೆ ಎಂದು ಹೇಳಿ ಮಧ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಎಂ.ಬಿ. ಉಳ್ಳಾಗಡ್ಡಿ ಸ್ವಾಗತಿಸಿದರು. ಕು.ಮಂಜುಳಾ ಹುಬ್ಬಳ್ಳಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜು ಒಕ್ಕೂಟದ ಅಧ್ಯಕ್ಷರಾದ ಅಕ್ಷತಾ ಕುಬ್ಯಾಳ, ಶ್ರೀ ಶಶಿಕುಮಾರ ಕಟ್ಟಿಮನಿ , ಶ್ರೀ ಮಹಾಂತೇಶ ನಿಂಬಣ್ಣವರ, ಶ್ರೀಮತಿ ಕುಲಸುಂಬಿ ಶೇಖ್, ಶ್ರೀ ಶಶಿಧರಯ್ಯ ಹೆಬ್ಬಳ್ಳಿಮಠ, ಶ್ರೀ ಕೆ. ಅಲೆಕ್ಸ್ ಪ್ರಭು ಹಾಗೂ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


