ಊರಿನಲ್ಲಿ 10 ತಿಂಗಳಿಂದ ವಿದ್ಯುತ್ ದೀಪಗಳು ಇಲ್ಲ ಜೆಜೆಎಂ ಕಾಮಗಾರಿ ಪ್ರಾರಂಭವಾಗಿ ಸುಮಾರು ಮೂರು ವರ್ಷ ಆಗಿದೆ ಊರಿನಲ್ಲಿ ರಸ್ತೆಗಳು ಕೆದರಿದ್ದು ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸುಮಾರು ಸಲ ದೂರು ಕೊಟ್ಟರು ಬೇಜವಾಬ್ದಾರಿ ತನ ತೋರಿಸುತ್ತಾರೆ ಮತ್ತು ಇದರಲ್ಲಿ ಅವರ ಪಾಲು ಇದೇ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ ಮತ್ತು ಊರಲ್ಲಿ ವಿದ್ಯುತ್ ದೀಪಗಳು ಇಲ್ಲದೆ ಜನಸಾಮಾನ್ಯರು ಕತ್ತಲಿನಲ್ಲಿ ಓಡಾಡಲು ಆಗುತ್ತಿಲ್ಲ ಮತ್ತು ಮೋಟಾರ್ ಗಳು ಸ್ಟಟರ್ ಕೆಟ್ಟು 9-10 ತಿಂಗಳು ಆಗುತ್ತಿವೆ.

ಅನೇಕ ಬಾರಿ ತಿಳಿಸಿದ್ದೇವೆ ಮತ್ತು ದುರಸ್ಥಿ ಮಾಡುವ ಮೆಕಾನಿಕ್ ಅವರ ಬಿಲ್ ವೇಲ್ಡರ್ ಗಳ ಬಿಲ್ ಪಾವತಿ ಮಾಡದ ಕಾರಣ ಅವರು ದುರಸ್ಥಿ ಮಾಡಲು ಬರುತ್ತಿಲ್ಲ ಅನೇಕ ಬಾರಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಅಧ್ಯಕ್ಷರು ಬಿಲ್ ಮಾಡುವಲ್ಲಿ ಸಹಕಾರ ಕೊಡುತ್ತಿಲ್ಲ ಆದ ಕಾರಣ ಈಗ ಬೇಸಿಗೆಕಾಲ ಬಂದಿದೆ ನೀರಿನ ಸಮಸ್ಯೆ ಆಗಬಾರದು ಬೇಗ ದುರಸ್ಥಿ ಮಾಡಿಸಿ ಅಂತ ದಿನಾಂಕ 10/02/2025 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಾವು ಸದಸ್ಯರಾಗಿ ತಿಳಿಸಿದರು.

ಯಾವುದೇ ಕ್ರಮ ಕೈಗೊಳ್ಳುತಿಲ್ಲ ಇವರುಗಳು ಮಾಡುವ ಬೇಜವಾಬ್ದಾರಿತನದಿಂದ ಜನಸಾಮಾನ್ಯರು ಹೇಳುವ ಸಮಸ್ಯೆಗಳಿಗೆ ಕೇಳುವ ಪ್ರೆಶ್ನೆಗಳಿಗೆ ಉತ್ತರ ನೀಡಲು ಮತ್ತು ಪರಿಹರಿಸಲು ಆಗುತ್ತಿಲ್ಲ ಆದಕಾರಣ 4-5 ದಿನಗಳಲ್ಲಿ ಮೂಲಸೌಕರ್ಯಗಳನ್ನು ಪರಿಹರಿಸದಿದ್ದಲ್ಲಿ ಎಲ್ಲ ಸದಸ್ಯರು ಸೇರಿ ಪಂಚಾಯಿತಿ ಕಾರ್ಯಾಲಯ ಮುತ್ತಿಗೆ ಅಕುತ್ತೇವೆ ಎಂದು ಎಚ್ಚರಿಕೆ ನೀಡುತಿದ್ದೇವೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಆನಂದ್ ಶಿವನೊಳ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್

