Ad imageAd image

ನಿಪ್ಪಾಣಿ ಕ್ಷೇತ್ರದ ಸಂಕಲ್ಪ ಮೋದಿಜಿ ಮತ್ತೊಮ್ಮೆ

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ :-   ಮೇ 07 ರಂದು ನಡೆದ ಲೋಕಸಭಾ ಚುನಾವಣೆ ಅಂಗವಾಗಿ ಇಂದು ನಿಪ್ಪಾಣಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆಅವರ ಪರವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರು ಕಾರ್ಯಕರ್ತರ ಬೃಹತ ಪ್ರಚಾರ ಸಭೆ ನಡೆಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಮಹಿಳೆಯರ ಅಪಾರ‌ ಕಾಳಜಿ ಹೊಂದಿರುವ ಮೋದಿಜಿ ಅವರು ನಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಿದ್ದಾರೆ. ಉಜ್ವಲಾ ಯೋಜನೆಯಡಿ ಈಗಾಗಲೇ ದೇಶದ ಎಲ್ಲ ಮಹಿಳೆಯರು ಒಳಗೊಂಡಿದ್ದಾರೆ‌.

ಲಖಪತಿ ದಿದಿ ಯೋಜನೆಯಡಿ ಸರ್ಕಾರ 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಗುರಿ ಹೊಂದಿದೆ. ದೇಶದ ಮಹಿಳಾ ಹಕ್ಕುಗಳ ರಕ್ಷಣೆಗೆ ಮಹತ್ವದ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದ್ದು ಮೋದಿ ಜಿ ಯವರ ಕೈ ಬಲಪಡಿಸಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಶ್ರೀ ಸುರೇಶ ಹಳವನಕರ,ಶ್ರೀ ಸಮರಜೀತಸಿಂಹ ಘಾಟಗೆ,ಶ್ರೀ ಚಂದ್ರಕಾಂತ ಕೋಠಿವಾಲೆ, ಶ್ರೀ ಸತೀಶ ಅಪ್ಪಾಜಿಗೋಳ,ಶ್ರೀ ರಿಷಭ ಜೈನ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರು,ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು,ನಗರಸಭೆ ಸದಸ್ಯರು, ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಪದಾಧಿಕಾರಿಗಳು,ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!