ಬೆಂಗಳೂರು : ರಾಜ್ಯದ ಶೇ.75ರಷ್ಟು ಮಂದಿಯಲ್ಲಿ ಬೊಜ್ಜು ಒಬೆಸಿಟಿ ಸಮಸ್ಯೆ ಇದೆ ಎಂದರೆ ಶಾಕ್ ಆಗೋದಿಲ್ವಾ? ರಾಜ್ಯದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗ ಮಂದಿ ಹೆಚ್ಚು ತೂಕ ಹೊಂದಿದ್ದಾರಂತೆ. ಅನಾರೋಗ್ಯಕರ ಲೈಫ್‌ಸ್ಟೈಲ್, ವ್ಯಾಯಾಮ ಇಲ್ಲದಿರುವುದು, ಸ್ಟ್ರೆಸ್ ಇದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕದಿಂದ ಬಳಲುತ್ತಿದ್ದಾರೆಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಅಪೊಲೊ ಆಸ್ಪತ್ರೆಗಳ ಇತ್ತೀಚಿನ ಹೆಲ್ತ್ ಆಫ್ ದಿ ನೇಷನ್ 2025 ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ರಾಜ್ಯದಲ್ಲಿ 2024ರಲ್ಲಿ ತಪಾಸಣೆಗೆ ಒಳಗಾದ ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.56 ರಂದು ಮಂದಿ ಬೊಜ್ಜು ಸಮಸ್ಯೆ ಹಾಗೂ ಶೇ.21ರಷ್ಟು ಮಂತಿ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ.
ಜಡ ಜೀವನಶೈಲಿ, ಕಳಪೆ ಪೋಷಣೆ ಮತ್ತು ರೋಗನಿರ್ಣಯ ಮಾಡದ ದೀರ್ಘಕಾಲದ ಪರಿಸ್ಥಿತಿಗಳಿಂದ ಸಮಸ್ಯೆ ಉಲ್ಭಣಿಸಿದ್ದು, ಇದು ಸಾರ್ವಜನಿಕ ಆರೋಗ್ಯ ಬಿಕ್ಕನ್ನು ಸೂಚಿಸುತ್ತದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ ರೋಗಲಕ್ಷಣ ಆಧಾರಿತ ಆರೋಗ್ಯ ರಕ್ಷಣೆ ಇನ್ನು ಮುಂದೆ ಸಾಕಾಗುವುದಿಲ್ಲ ಎಂದು ಹೇಳಿದೆ.
ಇನ್ನು ರಾಜ್ಯದಲ್ಲಿ ಪರೀಕ್ಷಿಸಲ್ಪಟ್ಟ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.28 ರಷ್ಟು ಮಂದಿ ಅಧಿಕ ರಕ್ತದೊತ್ತಡ, ಶೇ.20ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ.
ಶೇ.84ರಷ್ಟು ಮಂದಿಯಲ್ಲಿ ಮೂಳೆ ಸಮಸ್ಯೆ ಹಾಗೂ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ವಿಟಮಿನ್ ಡಿ ಸಮಸ್ಸೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ.
ಇದಲ್ಲದೆ, ಫ್ಯಾಟಿ ಲಿವರ್, ಋತುಬಂಧದ ನಂತರದ ಆರೋಗ್ಯ ಅಪಾಯಗಳು ಮತ್ತು ಬಾಲ್ಯದ ಸ್ಥೂಲಕಾಯತೆ ಸಮಸ್ಯೆಗಳು ಕಂಡು ಬಂದಿದ್ದು, ಬಾಲ್ಯದಲ್ಲಿಯೇ ಬೊಜ್ಜು ಹೆಚ್ಚುತ್ತಿರುವ ಕಳವಳಕಾರಿ ಅಂಶವಾಗಿದ್ದು, ಶೇ. 28 ರಷ್ಟು ಕಾಲೇಜು ವಿದ್ಯಾರ್ಥಿಗಳು ಅಧಿಕ ತೂಕ ಅಥವಾ ಬೊಜ್ಜು ಸಮಸ್ಯೆ ಹೊಂದಿರುವುದು ಮತ್ತು ಶೇ. 19 ರಷ್ಟು ಮಂದಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.
ಮಾನಸಿಕ ಆರೋಗ್ಯದಲ್ಲಿ ರಾಷ್ಟ್ರೀಯವಾಗಿ ಪರೀಕ್ಷಿಸಲಾದ ಶೇ. 7 ರಷ್ಟು ಮಹಿಳೆಯರು ಮತ್ತು ಶೇ. 5 ರಷ್ಟು ಪುರುಷರು ಕ್ಲಿನಿಕಲ್ ಖಿನ್ನತೆಯ ಲಕ್ಷಣಗಳಿಂದ ಬಲುತ್ತಿರುವುದು ಕಂಡು ಬಂದಿದೆ. ಮಧ್ಯವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ ಎಂದು ತಿಳಿಸಿದೆ.