Ad imageAd image

ನ.26 ರಂದು ಸಂಯುಕ್ತ ಕಿಸಾನ್ ಮೋರ್ಚವತಿಯಿಂದ ಬೃಹತ್ ಹೋರಾಟ :ಚಾಮರಸ ಮಾಲಿಪಾಟೀಲ್ ಬೆಟ್ಟದೂರ್

Bharath Vaibhav
ನ.26 ರಂದು ಸಂಯುಕ್ತ ಕಿಸಾನ್ ಮೋರ್ಚವತಿಯಿಂದ ಬೃಹತ್ ಹೋರಾಟ :ಚಾಮರಸ ಮಾಲಿಪಾಟೀಲ್ ಬೆಟ್ಟದೂರ್
WhatsApp Group Join Now
Telegram Group Join Now

ಮಾನ್ವಿ: –ಪಟ್ಟಣದ ಪತ್ರಿಕಾ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚ ರಾಜ್ಯಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ಬೆಟ್ಟದೂರ್ ಮಾತನಾಡಿ ರಾಜ್ಯ ಮತ್ತು ರಾಷ್ಟದಲ್ಲಿನ ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಸರಿಯಾದ ಪ್ರತಿಕ್ರಯೆ ನೀಡಿ ಸರಿದಾರಿಗೆ ತರುವ ಕಾರ್ಯದಲ್ಲಿ ವಿಫಲವಾಗಿವೇ. ತುಂಗಭದ್ರ ಜಲಾಶಯ ತುಂಬಿದ್ದು ಜಲಾಶಯ ವ್ಯಾಪ್ತಿಯ ರೈತರಿಗೆ ನವಂಬರ್ ಅಂತ್ಯದ ವರೆಗೆ ಭತ್ತದ ಬೆಳೆಗೆ ನೀರು ಬಿಡಬೇಕು ಹಾಗೂ ಬೇಸಿಗೆ ಬೆಳೆ ಬೆಳೆಯುವುದಕ್ಕೆ ರೈತರಿಗೆ ಅನುಕೂಲವಾಗುವಂತೆ ಶೀಘ್ರವೇ ಐ.ಸಿ.ಸಿ. ಸಭೆಯನ್ನು ಕರೆದು ಕಾಲುವೆಗಳಿಗೆ ನೀರು ಬಿಡುವುದಕ್ಕೆ ತಿರ್ಮಾನ ಮಾಡಬೇಕು, ರಾಜ್ಯದಲ್ಲಿ ಭತ್ತದ ಬೆಲೆ ಕಡಿಮೆಯಾಗಿದ್ದಾರು ಕೂಡ ಇದುವರೆಗೂ ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ.

ರಾಜ್ಯದ ಸಾವಿರಾರು ರೈತರ ಜಮೀನಿನ ಪಹಣಿಯಲ್ಲಿನ 11 ನೇ ಕಾಲಂನಲ್ಲಿ ವಕ್ಫ ಎಂದು ನಮೂದಿಸಲಾಗಿದ್ದು ರಾಜ್ಯಸರಕಾರದಿಂದ ನೋಟಿಸ್ ನೀಡಿ ರೈತರ ಭೂಮಿಯನ್ನು ಕಸಿದ್ದು ಕೊಳ್ಳುವ ಹೂನ್ನಾರವನ್ನು ಸಹಿಸಿಕೊಳ್ಳುವುದಿಲ್ಲ ಲಿಂಗಸೂಗೂರು ತಾಲೂಕು ಒಂದರಲ್ಲಿ ರೈತರ 17 ನೂರು ಎಕರೆ ಜಮೀನಿನ ಪಹಾಣಿಯಲ್ಲಿ ವಕ್ಪ ಎಂದು ನಮೂದಾಗಿದ್ದು ಜಿಲ್ಲೆಯಲ್ಲಿ ಕರ್ನಾಟಕ ರೈತ ಸಂಘದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ ಈ ಕುರಿತು ಮುಖ್ಯಮಂತ್ರಿಗಳೊoದಿಗೆ ಚರ್ಚೆ ನಡೆಸಿದ್ದು ಮುಖ್ಯ ಮಂತ್ರಿಗಳು ನೋಟಿಸ್ ವಾಪಸ್ ಪಡೆಯುವುದಾಗಿ ಬರವಸೆ ನೀಡಿದ್ದಾರೆ.

ರೈತರ ಒಂದಿಚ್ಚು ಭೂಮಿ ಕೂಡ ವಕ್ಪಗೆ ಹೋಗುವುದಕ್ಕೆ ಬಿಡುವುದಿಲ್ಲ, ಕೇಂದ್ರದಲ್ಲಿನ ಸರಕಾರವು ರೈತ ವಿರೋಧಿಯಾದ 3 ಕಾನೂನುಗಳನ್ನು ಜಾರಿ ಮಾಡಿರುವುದನ್ನು ಖಂಡಿಸಿ ದೇಶದ ಎಲ್ಲಾ ರೈತ ಸಂಘಟನೆಗಳು ಕೂಡಿ ದೆಹಲಿಯಲ್ಲಿ ನಿರಂತರವಾಗಿ 16 ತಿಂಗಳ ಕಾಲ ಪ್ರತಿಭಟನೆ ಹೋರಾಟ ನಡೆಸುವ ಮೂಲಕ ಕಾಯ್ದೆಗಳು ಜಾರಿಯಾಗದಂತೆ ತಡೆಯಲಾಯಿತು.

ರೈತರ ಹೋರಾಟಕ್ಕೆ 4 ವರ್ಷಗಳು ಕಳೆದರು ಕೂಡ ಕೇಂದ್ರ ಸರಕಾರ ರೈತರ ನ್ಯಾಯಯುತವಾದ ಬೇಡಿಕೆಗಳನ್ನು ಇದುವರೆಗೂ ಕೂಡ ಈಡೆರೆಸದೆ ಇರುವುದನ್ನು ಖಂಡಿಸಿ ರಾಜ್ಯದಲ್ಲಿನ ಎಲ್ಲಾ ರೈತಪರ,ದಲಿತಪರ,ಕಾರ್ಮಿಕ ಪರ,ಸಂಘಟನೆಗಳು ಹಾಗೂ ಪ್ರಗತಿಪರರು ಒಳಗೊಂಡoತೆ ರಾಜ್ಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚವನ್ನು ಏರ್ಪಡು ಮಾಡಿಕೊಂಡು ನಮ್ಮ ಪ್ರಮುಖ ಬೇಡಿಕೆಗಳಾದ ಭೂಸ್ವಾಧಿನ ಕಾಯ್ದೆಯನ್ನು ತಿದುಪಡಿಮಾಡಿ ಕೃಷಿಯೇತರ ಬಂಡವಾಳ ಶಾಹಿಗಳಿಗೆ ಕೃಷಿ ಭೂಮಿಯನ್ನು ಖರೀದಿಸುವುದಕ್ಕೆ ಅವಕಾಶ ನೀಡದೆ ಕೃಷಿಕರಿಗೆ ,ರೈತರಿಗೆ ಭೂಮಿ ಖರೀದಿ ಮಾಡುವುದಕ್ಕೆ ಅವಕಾಶ ನೀಡುವ ಮೂಲಕ ರೈತರಿಗೆ ಕೃಷಿಮಾಡುವುದಕ್ಕೆ ಭೂಮಿಯನ್ನು ಉಳಿಸುವುದು.

ಕೃಷಿ ಉತ್ಪನ್ನಗಳ ಖರೀದಿಗೆ ಖಾಸಗಿಯವರಿಗೆ ಅವಕಾಶವನ್ನು ಕೊಡುವುದರಿಂದ ಸ್ಥಳಿಯ ವ್ಯಾಪರಸ್ಥರಿಗೆ ಪೈಪೋಟಿ ನೀಡುವುದಕ್ಕೆ ಆಗುವುದಿಲ್ಲ ಹಾಗೂ ರೈತರು ಮಾರಾಟಮಾಡಿದ ಉತ್ಪನ್ನಗಳಿಗೆ ಸರಿಯಾದ ಬೇಲೆ ದೊರೆಯುವುದಿಲ್ಲ ಹಾಗೂ ರೈತರ ಹಣ್ಣಕ್ಕೆ ಭದ್ರತೆ ಇರುವುದಿಲ್ಲ ಅದ್ದರಿಂದ ಮೊದಲಿನಂತೆ ಕೃಷಿ ಉತ್ಪನ್ನ ಸಮಿತಿಗಳ ಮೂಲಕವೇ ರೈತರ ಉತ್ಪನ್ನಗಳ ಖರೀದಿ ನಡೆಯಬೇಕು.

ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ ರೈತರು ಬೆಳೆಯುವ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸುವುದಕ್ಕೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನತ್ಮಕವಾಗಿಸಬೇಕು. ಕಲ್ಮಲ ದಿಂದ ಸಿಂಧನೂರು ವೃತ್ತದವರೆಗೆ ನಡೆಯುತ್ತಿರುವ ಚತುಷ್ಪತ್ ರಸ್ತೆ ನಿರ್ಮಾಣ ಕಾಮಗಾರಿಯಿಂದ ಭೂಮಿ ಕಳೆದುಕೊಳ್ಳುವ ಎಲ್ಲಾ ರೈತರಿಗೆ ನೋಟಿಸ್ ನೀಡಬೇಕು ಹಾಗೂ ಜಮೀನಿನ ಆಳತೆ ಮಾಡುವುದಕ್ಕೆ ವಿಶೇಷವಾಗಿ ಸರ್ವೆ ಅಧಿಕಾರಿಯನ್ನು ನೇಮಕ ಮಾಡಿ ಶೀಘ್ರವೇ ಅಳತೆ ಮಾಡಿ ಭೂಮಿಕಳೆದು ಕೊಂಡ ರೈತರಿಗೆ ಬಡ್ಡಿ ಯೊಂದಿಗೆ ಪರಿಹಾರವನ್ನು ವಿತಸರಿಸಬೇಕು. ಎಂದು ಒತ್ತಾಯಿಸಿ ರಾಯಚೂರಿನಲ್ಲಿ ನ.26 ರಂದು ಸಂಯುಕ್ತ ಕಿಸಾನ್ ಮೋರ್ಚವತಿಯಿಂದ ಬೃಹತ್ ಹೋರಾಟ ನಡೆಸಲಾಗುವುದು.ಎಂದು ತಿಳಿಸಿದರು.

ಸಂಯುಕ್ತ ಕಿಸಾನ್ ಮೋರ್ಚದ ತಾ.ಅಧ್ಯಕ್ಷರಾಗಿ ಅಶೋಕ ನಿಲ್ಲಗಲ್,ಉಪಾಧ್ಯಕ್ಷರಾಗಿ ಶಿವಯ್ಯ ಲಕ್ಕಂದಿನ್ನಿ,ಕಾರ್ಯದಾರ್ಶಿಯಾಗಿ ಬಿ.ಆರ್,ಸದಾನಂದ,ಸ0ಘಟನಾ ಕಾರ್ಯದರ್ಶಿಯಾಗಿ ಹುಲಿಗೇಪ್ಪ ಸಿರವಾರ, ಖಜಾಂಚಿಯಾಗಿ ಹನುಮಂತ್ರಾಯ ನಸ್ಲಪುರ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿ.ಮುದಕಪ್ಪನಾಯಕ,ಶರಣಪ್ಪ ದೇವತಗಲ್,ಯಲ್ಲಪ್ಪ ನಾಯಕ ಕುರ್ಡಿ,ಆನಂದಭೋವಿ, ಲಕ್ಷಣ ಜಾನೇಕಲ್, ಮಲ್ಲೇಶ ಚಿಕಲಪರ್ವಿ.ಮಾರೆಪ್ಪ ಹರವಿ ರವರನ್ನು ಅವಿರೋಧವಾಗಿ ಸಂಯುಕ್ತ ಕಿಸಾನ್ ಮೋರ್ಚ ರಾಜ್ಯಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ಆಯ್ಕೆ ಮಾಡಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗರೆಡ್ಡಿ ಪಾಟೀಲ್ ,ಜಿಲ್ಲಾ ಕಾರ್ಯಧ್ಯಕ್ಷರು. ಬಸವರಾಜ ಮಾಲಿಪಾಟೀಲ್. ಅಶೋಕ ನಿಲಗಲ್, ಗೌರಪ್ಪಲಕ್ಕಂದಿನ್ನಿ,ವೆoಕಟೇಶನಾಯಕ, ಜಿ.ಕೃಷ್ಣಮೂರ್ತಿ, ವೀರೇಶನಾಯಕ, ಸೇರಿದಂತೆ ಇನ್ನಿತರರು ಇದ್ದರು.

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚ ರಾಜ್ಯಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ಮಾತನಾಡಿದರು.

ವರದಿ :-ಶಿವ ತೇಜ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!