ಬಾಗಲಕೋಟೆ : ಹುನಗುಂದ ತಾಲ್ಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಕೂಲಿ ಕಾರ್ಮಿಕರೊಂದಿಗೆ ನರೇಗಾ ದಿವಸ ಆಚರಣೆ ಮಾಡಲಾಯಿತು.
ಬಳಿಕ ಕೂಲಿ ಕಾರ್ಮಿಕರಿಗೆ ಹಳೆ ಜಾಬ್ ಕಾರ್ಡ್ ಬದಲಿಸಿ ಹೊಸ ಜಾಬ್ ಕಾರ್ಡ್ ನನ್ನು ವಿತರಣೆ ಮಾಡಲಾಯಿತು. ಜೊತೆಗೆ ಈ – ಶ್ರಮ್ ಕಾರ್ಡ್, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ವಿಮಾ ಯೋಜನೆಯಡಿ ಬ್ಯಾಂಕ್ ಖಾತೆ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ , ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಸಚಿನ ಕೊಳ್ಳಿ, ಗ್ರಾಪಂ ಸಿಬ್ಬಂದಿ ವರ್ಗ, ಕಾಯಕಬಂಧುಗಳು, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.