Ad imageAd image

ಪಟ್ಟಣಕೊಡಿ ಗ್ರಾಮದ ಬಾವಿ ಒಂದು ತಡೆಗೋಡೆ ಇಲ್ಲದೆ ಯಮನಾಗಿ ದಾರಿ ಕಾಯುತ್ತಿದೆ.

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ :- ಇದು ಸತ್ಯ ನಿಪ್ಪಾಣಿ ತಾಲೂಕಿನ ಪಟ್ಟಣಕೊಡಿ ಗ್ರಾಮದ ಸರ್ವೆ ನಂಬರ್ 149 ರಲ್ಲಿರುವ ಆನೆಕಾಂತ ಮಲಗೌಡ ಪಾಟೀಲ ಎಂಬುುರಿಗೆ ಸೇರಿರುವ ಈ ಬಾವಿ.ಪಟ್ಟಣಕುಡಿಯಂದ ಶಾಂತಿನಗರ ಮಾರ್ಗವಾಗಿ ಯಾದ್ಯನವಾಡಿ ಗ್ರಾಮಕ್ಕೆ ಹೋಗುವ ರಸ್ತೆ ಗ್ರಾಮದಿಂದ ಒಂದು 170 ಮೀಟರದಲ್ಲಿ ಈ ಬಾವಿ ಯಾರ ಜೀವ ತೆಗೆಯಲು ಯಮನಾಗಿ ಅಡ್ಡುನೆಂತಿದೆ.

ಈ ಬಾವಿ ಸುಮಾರು ನೂರು ವರ್ಷಗಳ ಹಿಂದಿನ ಹಳೆಬಾವಿ ಯಾಗಿದ್ದು ಅದು ದೊಡ್ಡ ಮಾತ್ರದಲ್ಲಿ ಕಳಚಿ ಅಲ್ಲಿಯ ಸಂಚಾರಿ ಮೋಟರ ಸೈಕಲ, ವೈಕಲ, ಕಬ್ಬಿನ ಟ್ರ್ಯಾಕ್ಟರ್ ಗಂತೂ ಫುಲ್ ಡೇಂಜರ ಸ್ವಲ್ಪ ಯಾಮಾರಿದರೆ ಆ ಬಾವಿಗೆ ಬಿದ್ದರೂ ಬದುಕಲು ಸಾಧ್ಯವಿಲ್ಲ ಅಂತ ಪರಿಸ್ಥಿತಿಯಲ್ಲಿ ಈ ಬಾವಿ ಸಾವಿಗಾಗಿ ಯಾರ ದಾರಿ ಕಾಯುತ್ತಿದೆ ಗೊತ್ತಿಲ್ಲ.

ಅಲ್ಲಿಯ ರೈತರು ಕಬ್ಬಿನ ಟ್ಯಾಕ್ಟರ್ ಗಳನ್ನು ಸಕ್ಕರೆ ಕಾರ್ಖಾನೆಗೆ ಕಳಿಸಬೇಕಾದರೆ ಬಾವಿಯ ದಡದಲ್ಲಿ ಸುಮಾರು 20 ಮೀಟರ್ ರಸ್ತೆಯನ್ನು ತಮ್ಮ ಸ್ವಂತ ಖರ್ಚಿನಿಂದಲೇ ಮಾಡಿಕೊಂಡಿದ್ದಾರೆ.

ಯಾಕೆಂದರೆ ಇಂತಹ ಪರಿಸ್ಥಿತಿಯನ್ನು ಎಷ್ಟೇ ಸಲ ಸಂಬಂಧಪಟ್ಟ ಶಾಸಕರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.ಆದರೆ ಈಗ ಈ ಪರಿಸ್ಥಿತಿಯನ್ನು ನೇರವಾಗಿ ನಮ್ಮ ವಾಹಿನಿಯಿಂದ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ತೋರಿಸುತ್ತಿದ್ದೇವೆ ನೋಡಿಯಾದರೂ ಎಚ್ಚೆತ್ತುಕೊಳ್ಳಲಿ.

ಜನರ ಜೀವ ಹೋದ ಮೇಲೆ ಮರಳಿ ತರಲಾಗುವುದಿಲ್ಲ ಜೀವಹೋಗುವಂತಹ ಘಟನೆ ನಡೆಯುವುದಕ್ಕಿಂತ ಮೊದಲೇ ಇಂತಹ ಸ್ಥಳಗಳನ್ನು ಪರಿಶೀಲಿಸಿ ಅಪಘಾತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಆದರೆ ಯಾಕೆ ಈ ಸ್ಥಿತಿ ಗಮನಕ್ಕೆ ಬರುತ್ತಿಲ್ಲ ಅದು ಅಲ್ಲಿಯ ಜನರಿಗೆ ಹಾಗೂ ರೈತರಿಗೆ ತಿಳಿಯುತ್ತಿಲ್ಲ ಇನ್ನಾದರೂ ಎಚ್ಚೆತ್ತುಕೊಂಡು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸ್ಥಳವನ್ನು ಪರಿಶೀಲಿಸಿ, ಈ ಬಾವಿಗೆ ಒಂದು ತಡೆಗೋಡೆ ಹಾಕಲೇಬೇಕು.

ಇಲ್ಲದಿದ್ದರೆ ಯಾವುದಾದರೂ ಅಪಘಾತ ನಡೆದು ಜೀವ ಹೋದಲ್ಲಿ ಅದಕ್ಕೆ ಹೊಣೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳು ಆಗಲಿದ್ದಾರೆ.ಈ ತಡೆಗೋಡೆ ವಿಷಯ ಕುರಿತು ಜಮೀನಿನ ಮಾಲೀಕರಾದ ಆನೆಕಾಂತ್ ಪಾಟೀಲ್ ಹಾಗೂ ರೈತರಾದ ಅಜ್ಜನವರು ಮಾತನಾಡಿದ್ದಾರೆ

ನಮ್ಮ ವಾಹಿನಿಯಲ್ಲಿ ಈ ರಸ್ತೆ ಪಕ್ಕದಲ್ಲಿರುವ ಪಾವಿಯ ದೃಶ್ಯಗಳನ್ನು ತೋರಿಸುತ್ತಿದ್ದೇವೆ ಅದನ್ನು ನೋಡಿದ ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ತಡೆಗೋಡೆ ನಿರ್ಮಿಸಿ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!