Ad imageAd image

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆ 

Bharath Vaibhav
ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆ 
prajwal revanna
WhatsApp Group Join Now
Telegram Group Join Now

ಮೈಸೂರು: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ಅಪಹರಣಕ್ಕೀಡಾಗಿದ್ದ ಸಂತ್ರಸ್ತೆಯನ್ನು ಮೈಸೂರು ಪೊಲೀಸರು ಮೈಸೂರಿನಲ್ಲಿ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಎಚ್‌.ಡಿ.ರೇವಣ್ಣ ಆಪ್ತ ಸಹಾಯಕ ರಾಜಶೇಖರ್‌ ತೋಟದ ಮನೆಯಲ್ಲಿದ್ದ ಸಂತ್ರಸ್ತೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದ್ದು, ಸದ್ಯ ಎಸ್‌ಐಟಿಅಧಿಕಾರಿಗಳು ಆಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಏಪ್ರಿಲ್‌ 29ರಂದು ಕೆ.ಆರ್.ನಗರದ ಮನೆಯಿಂದ ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.‌ ನಗರ ಠಾಣೆಯಲ್ಲಿ ಎಚ್‌.ಡಿ.ರೇವಣ್ಣ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು, ಇದೇ ವೇಳೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು, ಈಗ ಸದ್ಯ ಮಗನ ದೂರಿನ ಅನ್ವಯ ಮಹಿಳೆಯನ್ನು ಕಾಪಾಡಲಾಗಿದ್ದು, ಮಹಿಳೆಯನ್ನು ರಾಜಶೇಖರ್‌ ಕೂಡಿ ಹಾಕಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!