Ad imageAd image

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ.

Bharath Vaibhav
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ.
WhatsApp Group Join Now
Telegram Group Join Now

ಮೊಳಕಾಲ್ಮೂರು :- ಗೋಶಾಲೆಗಳನ್ನು ಎರಡು ತಿಂಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ.

ಮೊಳಕಾಲ್ಮೂರು :-ಮುಂಗಾರು ಬರುವ ಮುಂಚೇನೆ ಮಳೆ ಬಂದಿದೆ ಒಳ್ಳೆಯದು ಆದರೆ ಮಳೆ ಬಂದ ತಕ್ಷಣ ಹಸುಗಳಿಗೆ ಹುಲ್ಲು ಆಗುವುದಿಲ್ಲ ಆದಕಾರಣ ಗೋಶಾಲೆ ಇನ್ನೂ ಎರಡು ತಿಂಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ರೈತ ಸಂಘದ ಅಧ್ಯಕ್ಷ ಟಿ ರವಿಕುಮಾರ್ ತಿಳಿಸಿದರು.ಪಟ್ಟಣದಲ್ಲಿ ಬುಧುವಾರ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆಯಿಂದ ತಹಶೀಲ್ದಾರ್ ಶಂಕ್ರಪ್ಪ ಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಅವರು ಮಾತನಾಡಿ ಈ ವರ್ಷದಲ್ಲಿ ದಾಖಲೆ ಬಿಸಿಲು ಕಂಡು ಈಗ ಮಳೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಜಾನುವಾರುಗಳಿಗೆ ಮೇವು ನೀರು ಇಲ್ಲದೆ ಬೇರೆ ಊರುಗಳಿಗೆ ಹೋಗಿದ್ದಾರೆ ಹೀಗಿರುವಾಗ ಏಕಾಏಕಿ ಗೋಶಾಲೆಯನ್ನು ಮುಚ್ಚಿದರೆ ರೈತರಿಗೆ ತುಂಬಾ ಕಷ್ಟವಾಗುತ್ತದೆ ಇನ್ನು ಎರಡು ತಿಂಗಳು ಅಥವಾ ಮೂರು ತಿಂಗಳಾದರೂ ಮುತ್ತಿಗೆ ಹಾರಳಿಯ ಗೋಶಾಲೆಯ ಸುಮಾರು 1500ಕ್ಕೂ ಹೆಚ್ಚು ದೇವರೆತ್ತುಗಳಿದ್ದು ಹಾ ಎತ್ತುಗಳಿಗೆ ಮೇವು ನೀರು ನಿಲ್ಲಿಸಬಾರದು ಎಂದರು.

ಇದೇ ಸಂದರ್ಭದಲ್ಲಿ ಕೆಲ ರೈತ ಮುಖಂಡರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮೃತ್ಯುಂಜಯಪ್ಪ ಸ್ವಾಮಿ ಯಶವಂತ ಜಗದೀಶ್ ಮಂಜಣ್ಣ ಬೋರಯ್ಯ ನಾಗೇಶ್ ಕಾಟಯ್ಯ ಗುರುಸ್ವಾಮಿ ನಿಂಗಣ್ಣ ವಿಜಯ ಕುಮಾರ ಮಲ್ಲಿಕಾರ್ಜುನ ಇನ್ನು ಹಲವರು ಉಪಸ್ಥಿತರಿದ್ದರು

ವರದಿ:- ಪಿಎಂ ಗಂಗಾಧರ್

WhatsApp Group Join Now
Telegram Group Join Now
Share This Article
error: Content is protected !!