Ad imageAd image

ರತ್ನಶ್ರೀ ಪ್ರಶಸ್ತಿ ಭಾಜನ ವೈದ್ಯ ರಾಘವೇಂದ್ರ ಪತ್ತಾರ ಅವರಿಗೆ ವಿಶ್ವಕರ್ಮ ಸಮಾಜದಿಂದ ಗೌರವ ಸತ್ಕಾರ

Bharath Vaibhav
WhatsApp Group Join Now
Telegram Group Join Now

ಘಟಪ್ರಭಾ : ರತ್ನಶ್ರೀ ಪ್ರಶಸ್ತಿ ಭಾಜನ ವೈದ್ಯ ರಾಘವೇಂದ್ರ ಪತ್ತಾರ ಅವರಿಗೆ ವಿಶ್ವಕರ್ಮ ಸಮಾಜದಿಂದ ಗೌರವ ಸತ್ಕಾರ.ಹೌದು ಕೆಲ ದಿನಗಳ ಹಿಂದೆ ನಡೆದ ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಠ್ಠಣದ ವೈದ್ಯರಿಗೆ ಕರ್ನಾಟಕ ರತ್ನ ಶ್ರೀ ಶ್ರೇಷ್ಠ ರಾಜ್ಯ ಪ್ರಶಸ್ತಿ ಯನ್ನು ದಿನಾಂಕ ೧೩ನೆ ೨೦೨೪ ರಂದು ಪುರಭವನ ಮೈಸೂರು ಇಲ್ಲಿ ಗೌರವಾನ್ವಿತರಾದ ಡಾಕ್ಟರ್ ರಾಘವೇಂದ್ರ ಜಿ ಪತ್ತಾರ ಇವರ ವೈದ್ಯಕೀಯ ಕ್ಷೇತ್ರದಲ್ಲಿ ನಿರ್ವಹಿಸಿದ ಕರ್ತವ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಈ ಸಮಾರಂಭದಲ್ಲಿ ಕರ್ನಾಟಕ ರತ್ನ ಶ್ರೀ ಶ್ರೇಷ್ಠ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 

ಈ ಸುಸಂದರ್ಭದಲ್ಲಿ ಪ್ರಶಸ್ತಿ ಪಡೆದ ವಿಶ್ವಕರ್ಮ ಸಮಾಜದ ಘಟಪ್ರಭಾ ಪಠ್ಠಣದ ಖ್ಯಾತ ವೈದ್ಯರಾದ ಶ್ರೀ ರಾಘವೇಂದ್ರ ಪತ್ತಾರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಭಾಗ್ಯಶ್ರೀ ಪತ್ತಾರ ಅವರಿಗೆ ಶ್ರೀ ಶಿರಸಂಗಿ ಕಾಳಿಕಾ ದೇವಸ್ಥಾನದ ಕ್ಷೇತ್ರದಲ್ಲಿ ಹಳೆ ಗೋದಿಯ ಅಮಾವಾಸ್ಯೆಯ ನಿಮಿತ್ಯ ಕಾರ್ಯಕ್ರಮದಲ್ಲಿ ಅವರನ್ನು ಸಮಾಜದ ಗಣ್ಯ ಮಾನ್ಯರು ಸತ್ಕಾರ ಮಾಡಿದರು ನಂತರ ಕಾರ್ಯಕ್ರಮ ಹಮ್ಮಿಕೊಂಡು ಅದರಲ್ಲಿ ಅವರನ್ನು ಅಂದರೆ ವೈದ್ಯ ದಂಪತಿಗಳನ್ನು ಸತ್ಕರಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿ ಅಧ್ಯಕ್ಷರಾದ ಪಿ ಬಿ ಬಡಿಗೇರ್ ಎಸ್ ಕೆ ಪತ್ತಾರ್ ಮೋಹನ್ ಪತ್ತಾರ್ ಹಿಡಕಲ್ ಕುಮಾರ್ ಶ್ರೀನಿವಾಸ್ ರಾಘವೇಂದ್ರ ಪತ್ತಾರ್, ಕುಮಾರಿ ಕರುಣಾ ರಾಘವೇಂದ್ರ ಪತ್ತಾರ, ಡಾಕ್ಟರ ಭಾಗ್ಯಶ್ರೀ ರಾಘವೇಂದ್ರ ಪತ್ತಾರ, ಶ್ರೀಕಾಂತ್ ಪತ್ತಾರ, ಹಾಗೂ ಸಾವಿರಾರು ಜನಸಂಖ್ಯೆ ಉಪಸ್ಥಿತರಿದ್ದರು.ಒಟ್ಟಿನಲ್ಲಿ ವಿಶ್ವಕರ್ಮ ಸಮಾಜದ ಗಣ್ಯಮಾಣ್ಯರು ಸಮಾಜದ ಕುರಿತು ಯಾವೂದೇ ಕೆಲಸ ಮಾಡಿದರು ಅಥವಾ ಪ್ರಶಸ್ತಿ ಪಡೆದರು ಸಮಾಜ ಗುರುತಿಸಿಕೊಡುವಲ್ಲಿ ಮುಂದಾಗಿದ್ದಾರೆ ಅವರಿಗೆ ಡಾಕ್ಟರ್ ಪತ್ತಾರ ಅವರು ಧನ್ಯವಾದಗಳನ್ನ ತಿಳಿಸಿದರು.
ವರದಿ : ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!