ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಕೋಟ್ಯಂತರ ಅಕ್ರಮಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಶಾಸಕ ಬಿ ನಾಗೇಂದ್ರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ MLC ಸಿ ಟಿ ರವಿ ಅವರು ರಾಜ್ಯದಲ್ಲಿ ರಾವಣನ ದರ್ಬಾರು ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕುಡುತೀನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಕೋಟ್ಯಾಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಿಟಿ ರವಿ ಜನರ ಕಲ್ಯಾಣಕ್ಕೆ ಖರ್ಚಾಗ ಬೇಕಿದ್ದ ಹಣ ಬಾರ್ ಗೆ ಹಾಕಿದ್ದಾರೆ. ಜನರ ಕಷ್ಟಕ್ಕೆ ಬಳಕೆಯಾಗಬೇಕಾದ ಹಣ ಅವರ ಹೆಂಡತಿರು, ಮಕ್ಕಳಿಗೆ ಒಡವೆ ಖರೀದಿ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಈ ಪಾಪಕ್ಕೆ ಕ್ಷಮೆ ಇಲ್ಲ ಹೀಗಾಗಿ ಅವರಿಗೆ ಶಿಕ್ಷೆ ನೀಡಬೇಕು. ಜನ ಶಿಕ್ಷೆ ನೀಡಿದರೆ ರಾಜಕೀಯದಲ್ಲಿ ರಾವಣ ದರ್ಬಾರು ಇರಲ್ಲ. ರಾಜಕೀಯದಲ್ಲಿ ಯಾವಾಗ್ಲೂ ರಾಮನ ದರ್ಬಾರು ಇರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಮಾಡುತ್ತಿರುವುದು ರಾವಣನ ದರ್ಬಾರು ಎಂದು ಕುಡುತಿನಿ ಗ್ರಾಮದಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.