Ad imageAd image
- Advertisement -  - Advertisement -  - Advertisement - 

ಇತ್ತೀಚೆಗೆ ಯುವಜನತೆಯಲ್ಲು ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆ

Bharath Vaibhav
ಇತ್ತೀಚೆಗೆ ಯುವಜನತೆಯಲ್ಲು ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆ
WhatsApp Group Join Now
Telegram Group Join Now

ಇತ್ತೀಚಿನ ವರ್ಷಗಳಲ್ಲಿ ಪುರುಷರು, ಮಹಿಳೆಯರು ಅನ್ನೋ ವ್ಯತ್ಯಾಸವಿಲ್ಲದೆ ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಆದ್ರೆ ಮಹಿಳೆಯರಲ್ಲಿ ಹೃದಯಾಘಾತದ ಹೆಚ್ಚಿಸುವ ಅಪಾಯಕಾರಿ ಅಂಶಗಳು ಯಾವುವು ಎಂದು ನಿಮಗೆ ಗೊತ್ತಾ?

ಮೊದಲೆಲ್ಲಾ ವೃದ್ದರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಹೃದಯಾಘಾತದ ಸಮಸ್ಯೆ ಎದುರಿಸುತ್ತಿದ್ದಾರೆ. ಪುರುಷರು, ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ.

ಪ್ರಸ್ತುತ ಜೀವನಶೈಲಿ ಹೆಚ್ಚಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡ, ವ್ಯಾಯಾಮ ಮಾಡದಿರುವುದು. ಕೆಟ್ಟ ಆಹಾರಕ್ರಮ ಆರೋಗ್ಯವನ್ನು ಹದಗೆಡಿಸುತ್ತದೆ.

ಆದರೆ ಮಹಿಳೆಯರಲ್ಲಿ ಹೃದಯಾಘಾತದ ಹೆಚ್ಚಿಸುವ ಅಪಾಯಕಾರಿ ಅಂಶಗಳು ಯಾವುವು ನಿಮ್ಗೆ ಗೊತ್ತಿದ್ಯಾ?

ಹೃದಯಾಘಾತದ ನೋವು ಎಡ ಎದೆಯಿಂದ ಪ್ರಾರಂಭವಾಗಬಹುದು ಮತ್ತು ಅಲ್ಲಿಂದ ಕತ್ತಿನ ಮಧ್ಯಕ್ಕೆ ಎಡ ಭುಜ, ಎಡಗೈ ಅಥವಾ ಗಲ್ಲದ ಮೂಳೆಗೆ ಮಾತ್ರ ಚಲಿಸಬಹುದು. ಬೆವರುವುದು, ತೀವ್ರ ಆಯಾಸ, ಉಸಿರಾಟದ ತೊಂದರೆ ಮತ್ತು ವಾಕರಿಕೆ ಹೃದಯಾಘಾತದ ಇತರ ಆರಂಭಿಕ ಚಿಹ್ನೆಗಳು. ಮಹಿಳೆಯರಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳು ಯಾವುವು ತಿಳಿಯೋಣ.

ಅಧಿಕ ರಕ್ತದೊತ್ತಡವು ಹೃದಯ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ  ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ಆದ್ದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ವಿಧಾನಗಳನ್ನು ಅಳವಡಿಸಿಕೊಳ್ಳಿ.

ಮಧುಮೇಹ ಸಹ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಧಿಕ ತೂಕವು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು.

ಧೂಮಪಾನದಿಂದ ಹೃದಯಾಘಾತದ ಸಾಧ್ಯತೆ ಹೆಚ್ಚು. ಧೂಮಪಾನವು ಹೃದಯಕ್ಕೆ ಆಮ್ಲಜನಕದ ಸರಬರಾಜು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಧೂಮಪಾನವನ್ನು ತ್ಯಜಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಒತ್ತಡವು ಸಹ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ ಒತ್ತಡವನ್ನು ನಿರ್ವಹಿಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.

WhatsApp Group Join Now
Telegram Group Join Now
Share This Article
error: Content is protected !!