Ad imageAd image

ಧರ್ಮ ಉಳಿಯಬೇಕು ಆಚಾರ ವಿಚಾರ ಉಳಿದು ಬೆಳೆಯ ಬೇಕು :-ಪರಮ ಪೂಜ್ಯ ಮಹಾಂತ ಸ್ವಾಮೀಜಿ

Bharath Vaibhav
ಧರ್ಮ ಉಳಿಯಬೇಕು ಆಚಾರ ವಿಚಾರ ಉಳಿದು ಬೆಳೆಯ ಬೇಕು :-ಪರಮ ಪೂಜ್ಯ ಮಹಾಂತ ಸ್ವಾಮೀಜಿ
WhatsApp Group Join Now
Telegram Group Join Now

ಮುದಗಲ್ಲ :- ಐತಿಹಾಸಿಕ ಪಟ್ಟಣದಲ್ಲಿ ಕುಂಬಾರ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ದ ಜಾತ್ರ ಪ್ರಯುಕ್ತ ಹಾಗೂ ಬಸವ ಜಯಂತಿ ಅಂಗವಾಗಿ ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ಚರಿತ್ರೆಯನ್ನು ದಿನಾಂಕ 29 -04 -24ಪ್ರತಿದಿನ ರಾತ್ರಿ 7:00 ಯಿಂದ 9:00 ವರೆಗೆ ಪುರಾಣ ಕಾರ್ಯಕ್ರಮ ದಲ್ಲಿ ಪರಮ ಪೂಜ್ಯ ಮಹಾಂತ ಸ್ವಾಮೀಜಿ ಯವರು ಸಾನಿಧ್ಯ ಪ್ರವಚನದಲ್ಲಿ ವೇದಿಕೆ ಯಲ್ಲಿ ನಾವಿಂದು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ ಧರ್ಮ ಉಳಿಯಬೇಕು ಆಚಾರ ವಿಚಾರ ಉಳಿದು ಬೆಳೆದು ಬರಲು ನಾವೆಲ್ಲರೂ ತ್ರಿಕರ್ಣ ಪೂರ್ಣವಾಗಿ ಕಂಕಣ ಬದ್ಧರಾಗಬೇಕಿದೆ

ವೀರಶೈವರು, ಲಿಂಗಾಯತರು ಮೊದಲು ಲಿಂಗ ಧರಿಸಬೇಕು. ಲಿಂಗಧರಿಸಿದವರು ಲಿಂಗಾಯತರು. ಇಂದು ವೀರಶೈವರು ಲಿಂಗಾಯತರುಎಷ್ಟೀದ್ದೀರಿ? ಎಷ್ಟು ಜನ ಲಿಂಗವನ್ನು ಧರಿಸಿದ್ದೀರಿ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಷ್ಟಲಿಂಗ ಧರಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ಅಂಗದಲ್ಲಿ ಧರಿಸಿದ ಲಿಂಗ ಅಂಗೈಗೆಬಂದು ನಿಷ್ಠೆಯಿಂದ ಪೂಜೆಗೊಳ್ಳಬೇಕು. ನಾವೆಷ್ಟೇ ಬಂಗಾರ ಬೆಳ್ಳಿಧರಿಸಿದರೂ ಕೊನೆಗೆ ನಮ್ಮ ಹಿಂದೆ ಬರುವದು ಧರಿಸಿದ ಲಿಂಗವೊಂದೇ ಎಂದರು.

ಆಧುನಿಕತೆಯ ಭರಾಟೆಯಲ್ಲಿ ಮನುಷ್ಯನಲ್ಲಿ ನಮ್ಮ ಸಂಸ್ಕೃತಿ ಮಾಯವಾಗುತ್ತಿದೆ. ಇದರಿಂದ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ಮನುಷ್ಯ ಹಣ ಗಳಿಸುವ ಭರಾಟೆಯಲ್ಲಿ ಮಾನವೀಯತೆ ಯನ್ನು ಮರೆಯುತ್ತಿದ್ದಾನೆ.

ಮನುಷ್ಯನಾದವನು ತನಗಾಗಿ ಬದುಕದೇ ಇತರರಿಗಾಗಿ ಬದುಕುವ ಬಾಳಿನಲ್ಲಿ ಸುಖ ಶಾಂತಿಯನ್ನು ಕಾಣಲು ಸಾಧ್ಯ. ಈ ಹಿನ್ನಲೆಯಲ್ಲಿ ಮಹಾನ್ ವ್ಯಕ್ತಿಗಳ ತತ್ವಾ ದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರವಚನಗಳು ಸಹಕಾರಿಯಾಗಿವೆ ಎಂದರು.

ಲಿಂಗಮ್ಮ ಎಂದು ಕರೆಯಲ್ಪಡುತ್ತಿದ್ದ ಮಹಾ ಮಹಿಮೆ ದಾನಮ್ಮ ದೇವಿ ಹುಟ್ಟಿದ್ದು ಈಗಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಸಣ್ಣ ಗ್ರಾಮದಲ್ಲಿ. ಈಗಿನ ಕರ್ನಾಟಕದ ವಿಜಯಪುರದಿಂದ ಉತ್ತರಕ್ಕೆ ೨೦ ಮೈಲಿ ದೂರವಿರುವ ಈ ಸ್ಥಳ ಹನ್ನೆರಡನೆ ಶತಮಾನದ ಆಸು ಪಾಸಿಗೆ ಕನ್ನಡ ಭಾಷಿಗರಿಂದಖ ಕೂಡಿತ್ತು.

ಇಂತಹ ಕನ್ನಡ ಭಾಷಿಗ ರೈತಾಪಿ ವರ್ಗಕ್ಕೆ ಸೇರಿದ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳಿಗೆ ಜನಿಸಿದ ಮಗಳೇ ಲಿಂಗಮ್ಮ. ಈಕೆ ವಚನ ಪಿತಾಮಹ, ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರ ಸಮ ಕಾಲೀನಳು. ಹಾಗಾಗಿ ಈಕೆಯು ಜೀವಿಸಿದ್ದ ಕಾಲವೂ ಹನ್ನೆರಡನೆ ಶತಮಾನ.

ಬಾಲ್ಯದಲ್ಲಿ ತನ್ನ ಗುರುಗಳಿಂದ ದೃಷ್ಟಿಯೋಗದ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಲಿಂಗಮ್ಮ ‘ದೃಷ್ಟಿಯೋಗವನ್ನು ಕಲಿಸಿ ಕೊಡಬಲ್ಲ ಗುರುಗಳು ಯಾರು?’ ಎಂದು ತನ್ನ ಗುರುಗಳನ್ನು ಕೇಳುತ್ತಾಳೆ. ಆಗ ಅವರು ದೃಷ್ಟಿ ಯೋಗದಲ್ಲಿ ಅದಾಗಲೇ ಪರಿಣತರಾಗಿದ್ದ ಸಿದ್ಧರಾಮರ ಹೆಸರನ್ನು ಉಲ್ಲೇಖಿಸುತ್ತಾರೆ ಹಾಗು ಸಿದ್ಧರಾಮರನ್ನು ಲಿಂಗಮ್ಮಳಿಗೆ ಭೇಟಿ ಮಾಡಿಸುತ್ತಾರೆ ಕೂಡ.

ದೃಷ್ಟಿಯೋಗ ಎನ್ನುವುದು ಯೋಗದ ಐದನೇ ಅಂಗ ‘ಪ್ರತ್ಯಾಹಾರ’ ಕ್ಕೆ ಸೇರಿದ್ದಾಗಿದ್ದು ಇಂದ್ರೀಯ ಶಕ್ತಿಗಳನ್ನು ಹಿಂತೆಗೆಯುವುದನ್ನು ಒಳಗೊಂಡಿದೆ ಹಾಗು ಯೋಗದ ಆರನೇ ಅಂಗವಾದ ‘ಧಾರಣ’ ಎಂಬ ಏಕಾಗ್ರತೆಗೆ ಸಂಬಂಧಪಟ್ಟ ಅಂಶಗಳನ್ನು ಒಳಗೊಂಡಿದೆ. ಸಿದ್ಧರಾಮರಲ್ಲಿ ದೃಷ್ಟಿಯೋಗದ ಬಗ್ಗೆ ವಿಚಾರಿಸಿದಾಗ ಅವರು ‘ವಿದ್ಯೆಗಳನ್ನು ಕಲಿತ ಮೇಲೆ ಅದನ್ನು ಒಳ್ಳೆ ಕಾರ್ಯಕ್ಕಿಂತ ಕೆಟ್ಟ ಕಾರ್ಯಗಳಿಗೆ ಬಳಸುವರ ಸಂಖ್ಯೆಯೇ ಹೆಚ್ಚು’ ಎಂದು ಆತಂಕ ಪಡುತ್ತಾರೆ.

ಸಿದ್ಧರಾಮರಿಗೆ ತಾನು ಹೇಳಿಕೊಟ್ಟ ವಿದ್ಯೆ ಜನರ ಉದ್ಧಾರಕ್ಕಾಗಿ ಇರಬೇಕೆ ಹೊರತು ಇನ್ಯಾವುದಕ್ಕೂ ಅಲ್ಲ ಎಂಬ ಅಭಿಲಾಷೆಯಿರುತ್ತದೆ. ಲಿಂಗಮ್ಮಳು ಈ ವಿಚಾರದಲ್ಲಿ ತನ್ನಲ್ಲಿ ಭರವಸೆ ಇಡುವಂತೆ ಬೇಡಿಕೊಳ್ಳುತ್ತಾಳೆ, ಹಾಗು ತಾನು ಕಲಿತ ಎಲ್ಲ ವಿದ್ಯೆಗಳನ್ನು ಕೇವಲ ರಚನಾತ್ಮಕ ಕಾರ್ಯಗಳಲ್ಲಿ ಮಾತ್ರ ಬಳಸಿಕೊಳ್ಳುವುದಾಗಿ ಭರವಸೆ ನೀಡುತ್ತಾಳೆ.

ಇದರಿಂದ ಸಂತುಷ್ಟರಾದ ಗುರು ಸಿದ್ಧರಾಮರು ಲಿಂಗಮ್ಮಳಿಗೆ ದೃಷ್ಟಿಯೋಗ ವಿದ್ಯೆಯನ್ನು ಹೇಳಿಕೊಡುತ್ತಾರೆ. ಅದರ ಜೊತೆಗೆ ಅವರಿಗೂ ಕಲ್ಯಾಣದ ಬಸವಣ್ಣನವರ ಅನುಭವ ಮಂಟಪದೊಂದಿಗೆ ಇರುವ ಬಾಂಧವ್ಯವನ್ನು, ಅನುಭವವನ್ನು, ಹಾಗು ಅಲ್ಲಿನ ವಿಚಾರಗಳನ್ನು ಲಿಂಗಮ್ಮಳೊಂದಿಗೆ ಹಂಚಿ ಕೊಳ್ಳುತ್ತಾರೆ

ಇದರಿಂದ ಪ್ರಭಾವಿತಳಾದ ಲಿಂಗಮ್ಮ ತಾನು ಬಸವಣ್ಣನವರನ್ನು ಹಾಗು ಅನುಭವ ಮಂಟಪದ ಇತರ ಶರಣರನ್ನು ಕಾಣಲು ಉತ್ಸುಕಳಾಗುತ್ತಾಳೆ ಮತ್ತು ಕಲ್ಯಾಣಕ್ಕೆ ಹೊರಟು ಎಂದು ಪರಮ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ನಂತರ ಮಾತನಾಡಿದ  ಬಸವೇಶ್ವರ ನ ಸಮಿತಿ ಅಧ್ಯಕ್ಷ ರಾದ ಮಲ್ಲಪ್ಪ ಮಾಟೂರು ಮಾತನಾಡಿ,02 ವರ್ಷಗಳಿಂದ ಪುರಾಣ ಪ್ರವಚನ ಏರ್ಪಡಿಸಿ ಈಭಾಗದಲ್ಲಿ ಭಕ್ತಿ ಜ್ಞಾನವನ್ನು ಪ್ರಸರಿಸಿದೆ. ದೇವಸ್ಥಾನದ ಟ್ರಸ್ಟಿಗಳು ಉತ್ಸಾಹಿ ಯುವಕರ ಪಡೆ ಎಲ್ಲ ಕಾರ್ಯಕ್ರಮ ಗಳನ್ನು ಅಚ್ಚು ಕಟ್ಟಾಗಿಯ ಭಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ
ಬರುವ ದಿನಗಳಲ್ಲಿ ದೇವಸ್ಥಾನವನ್ನು ಜೀಣೋರ್ದ್ದಾರಗೊಳಿಸಿ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು

ಈ ಸಂದರ್ಭದಲ್ಲಿ ಬಸವ ದೇವಸ್ಥಾನದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಶಾಂಭವಿ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಮುದಗಲ್ಲ ಸೇರಿ ಸುತ್ತ ಮುತ್ತಲಿನ ಹಳ್ಳಿ ಭಾಗದ ಭಕ್ತರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!