ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಕ್ಕಿದ್ದು, ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ.
ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದ ಟಾಕ್ಸಿಕ್ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿದೆ. ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರತಂಡ ಗಿಫ್ಟ್ ನೀಡಿದೆ.
ಈ ಹಿಂದೆ ಚಿತ್ರಕ್ಕೆ ಸಂಬಂಧಿಸಿದಂತೆ ಯಶ್ ಅವರ ಒಂದಷ್ಟು ಫೋಟೋಗಳು ರಿಲೀಸ್ ಆಗಿದ್ದವು. ಇಂದು ರಿಲೀಸ್ ಆದ ಟೀಸರ್ ನಲ್ಲಿ ಯಶ್ ಅವರ ಪಾತ್ರ ರಿವೀಲ್ ಆಗಿದೆ. ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಟೈಟಲ್ ಟೀಸರ್ ಬಿಡುಗಡೆಯಾಗಿತ್ತು. ಗ್ಯಾಂಗ್ ಸ್ಟರ್ ರೀತಿಯಲ್ಲಿ ಖಡಕ್ ಲುಕ್ ನಲ್ಲಿ ನಟ ಯಶ್ ಮಿಂಚಿದ್ದರು.
ಚಿತ್ರದಲ್ಲಿ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ನಟಿಯರ ದೊಡ್ಡ ಬಳಗವೇ ಇದೆ. ಸಿನಿಮಾದಲ್ಲಿ ಊಹಿಸಲಾದ ಟ್ವಿಸ್ಟ್ ಗಳು ಇದೆ ಎಂದು ಅಂದಾಜಿಸಲಾಗಿದ್ದು, ಸಿನಿಮಾ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿಸಿದೆ.
ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟ ಯಶ್ ಅವರ ಹೊಸ ಸಿನಿಮಾ ಟ್ಯಾಕ್ಸಿಕ್ ಚಿತ್ರಕ್ಕಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಸದ್ಯ ರಿಲೀಸ್ ಆದ ಟ್ಯಾಕ್ಸಿಕ್ ಚಿತ್ರದ ಟೀಸರ್ ಸಿನಿಪ್ರಿಯರ ಗಮನ ಸೆಳೆದಿದೆ.




