ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಮಂಗಳ ಗ್ರಹದ ಮೇಲೆ ಅನ್ವೇಷಣೆ ನಡೆಸಲು ಬಿಟ್ಟಿರುವ ಉಪಗ್ರಹದ ರೋವರ್ ಗೆ ಜೇಡರ ಗೂಡುಮೊಟ್ಟೆಗಳನ್ನು ಹೋಲುವಂಥಾ ವಸ್ತು ಪತ್ತೆಯಾಗಿದೆ.
ನೂರಾರು ಮಿಲಿಮೀಟರ್ ಗಾತ್ರದ ಸಣ್ಣಸಣ್ಣ ನೊರೆಯಂಥಾ ರಚನೆಯು ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿದ್ದು, ಈಗ ನಾಸಾ ಈ ವಸ್ತುವಿನ ಸುತ್ತ ಹಲವು ಆಯಾಮಗಳಲ್ಲಿ ಅನ್ವೇಷಣೆ ನಡೆಸಲು ಮುಂದಾಗಿದೆ.
ಆ ಗೂಡಿನ ರಚನೆ, ಭೌಗೋಳಿಕ ಹಿನ್ನೆಲೆ ಹಾಗೂ ರೂಪುಗೊಂಡಿರುವ ಪದಾರ್ಥದ ಮೂಲವಸ್ತುಗಳ ಬಗ್ಗೆ ಮಾಹಿತಿ ಕೆದಕಲಾಗುತ್ತಿದ್ದು, ಪ್ರತಿಯೊಂದು ಮೊಟ್ಟೆಯ ಮೇಲೂ ಸೂಜಿ ಗಾತ್ರದ ರಂಧ್ರಗಳಿರುವುದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ.
ಅಮೆರಿಕ 2021 ರಲ್ಲಿ ಉಡಾಯಿಸಿದ್ದ ಈ ರೋವರ್ ಇದುವರೆಗೂ ನಾಸಾಗೆ ಹಲವು ಅನ್ವೇಷಣೆಗಳ ಬಗ್ಗೆ ಅಪೂರ್ವ ಮಾಹಿತಿ ನೀಡಿದೆ.