Ad imageAd image

ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ :ಹೋಟೆಲ್ಗಳು ತಾತ್ಕಾಲಿಕ ಬಂದ್ 

Bharath Vaibhav
ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ :ಹೋಟೆಲ್ಗಳು ತಾತ್ಕಾಲಿಕ ಬಂದ್ 
WhatsApp Group Join Now
Telegram Group Join Now

ಬೆಂಗಳೂರು : ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

ವಿಶೇಷವಾಗಿ ಹೆಚ್ಚು ಎಣ್ಣೆ ಮತ್ತು ಗ್ಯಾಸ್ ಬಳಕೆಯಾಗುವ ತಿಂಡಿಗಳಾದ ಉದ್ದಿನ ವಡೆ, ಬಜ್ಜಿ, ಪಕೋಡ, ಪೂರಿ, ಗೋಬಿ ಮಂಚೂರಿಯನ್ ಮೊದಲಾದ ಐಟಂಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಗ್ಯಾಸ್ ಪೂರೈಕೆ ಸಮಸ್ಯೆ ಮುಂದುವರಿದಿರುವುದರಿಂದ ಹೋಟೆಲ್ ಮಾಲೀಕರು ಪರ್ಯಾಯ ಕ್ರಮವಾಗಿ ಕಡಿಮೆ ಗ್ಯಾಸ್ ಬಳಕೆಯ ಆಹಾರ ಪದಾರ್ಥಗಳನ್ನು ಮಾತ್ರ ತಯಾರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಹಕರಿಸುವಂತೆ ಮನವಿ ಮಾಡಿರುವ ಹೋಟೆಲ್ ಮಾಲೀಕರು, ಈ ತಿಂಡಿಗಳನ್ನು ಕೇಳಬೇಡಿ ಮತ್ತು ಸಾಧ್ಯವಾದಷ್ಟು ರೈಸ್ ಐಟಂಗಳನ್ನು ಆರ್ಡರ್ ಮಾಡಿ ಎಂದು ವಿನಂತಿಸಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಪೂರೈಕೆ ಸರಾಗವಾದ ಬಳಿಕ ಈ ತಿಂಡಿಗಳನ್ನು ಮತ್ತೆ ಮೆನುವಲ್ಲಿ ಸೇರಿಸಲಾಗುತ್ತದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!