Ad imageAd image
- Advertisement -  - Advertisement -  - Advertisement - 

ನಮ್ಮ ದೇಶದ ಸ್ವಿಜರ್ಲ್ಯಾಂಡ್ ಕಾಶ್ಮೀರ ಆಗಲಿದೆ: ಜಗದೀಶ್ ಶೆಟ್ಟರ್

Bharath Vaibhav
ನಮ್ಮ ದೇಶದ ಸ್ವಿಜರ್ಲ್ಯಾಂಡ್ ಕಾಶ್ಮೀರ ಆಗಲಿದೆ: ಜಗದೀಶ್ ಶೆಟ್ಟರ್
WhatsApp Group Join Now
Telegram Group Join Now

ಬೆಳಗಾವಿ: ಆರ್ಟಿಕಲ್ 370 ತಗೆದು ಹಾಕಿದ್ದರಿಂದ ಕಾಶ್ಮೀರ ತುಂಬಾ ಅಭಿವೃದ್ಧಿ ಆಗಿದೆ‌. ಮುಂದಿನ ದಿನಗಳಲ್ಲಿ ಸ್ವಿಜರ್ಲ್ಯಾಂಡ್ ಹೊಗುವ ಬದಲು ನಾವು ಕಾಶ್ಮೀರಕ್ಕೆ ಹೊಗಿ ಪ್ರವಾಸ ಮಾಡಬಹುದು. ನಮ್ಮ ದೇಶದ ಸ್ವಿಜರ್ಲ್ಯಾಂಡ್ ಕಾಶ್ಮೀರ ಆಗಲಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ

ಶುಕ್ರವಾರ ಬೆಳಗಾವಿ ನಗರದ ಜಿರಗೆ ಸಭಾ ಭವನದಲ್ಲಿ ಹಾಗೂ ಲಿಂಗರಾಜ ಕಾಲೇಜಿನಲ್ಲಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತಗೆದ ಮೇಲೆ ಮೊದಲು ಆಗುತ್ತಿದ್ದ ಅನಾಹುತಗಳು ಈಗ ಆಗುತ್ತಿಲ್ಲ.‌
ಪಾಕಿಸ್ತಾನದವರು ಕಾಶ್ಮೀರದ ಕೆಲವು ಸ್ಥಳಗಳನ್ನು ಆಕ್ರಮ ಮಾಡಿದರು.‌ ಹಾಗಾಗಿ ಆ ಸ್ಥಳವನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುತ್ತಾರೆ. ಭಾರತದ ಮ್ಯಾಪ್ ನಲ್ಲಿ ಪಿಓಕಿ ಎಂದು ಇರುವುದು ನಮಗೆ ಒಂದು ಕಪ್ಪು ಚುಕ್ಕೆ ಇದ್ದಂತೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾದ ಮೇಲೆ ಪಿಓಕೆ ತೆಗೆದು ಹಾಕಿ, ಅದನ್ನು ಜಮ್ಮುಕಾಶ್ಮೀರ ದಲ್ಲಿ ಸೇರಿಸಿ ಅದನ್ನು ಮ್ಯಾಪ್ ಮೇಲೆ ಅಖಂಡ ಕಾಶ್ಮೀರ್ ಕಾಣಿಸುವ ಹಾಗೆ ಮಾಡುವುದೆ ಮುಂದಿನ ಅಜೆಂಡಾ ಆಗಿದೆ ಎಂದು ಜಗದೀಶ್ ಶೆಟ್ಟರ್ ಅವರು ತಿಳಿಸದರು‌‌

ಬಳಿಲ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರು, ನಮ್ಮ ಕೆಎಲ್ಇ ಸಂಸ್ಥೆಯಲ್ಲಿ ಪಾಸ್ ಆದವರು ಸಿಎಂ ಆಗಿ ಜಗದೀಶ್ ಶೆಟ್ಟರ್ ಅವರು ಕೆಲಸ ಮಾಡಿದ್ದು ನಮಗೆ ಗೌರವ, ಹಾಗಾಗಿ ಸೇರಿರುವ ಶಿಕ್ಷಕರು ಜಗದೀಶ್ ಶೆಟ್ಟರ್ ಅವರಿವೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ತಿಳಿಸಿದರು. ‌

ಈ ವೇಳೆ ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಡಾ. ನಿತೀಶ್ ಗಂಗಾಣಿ ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು.‌

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!