Ad imageAd image

ಲೈಂಗಿಕ ಹಗರಣಕ್ಕೆ ಗುರಿಯಾಗಿರುವಂತಹ ಆರೋಪಿಗಳನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡುತ್ತಿದೆ : ರಾವಸಾಬ ಐಹೋಳೆ

Bharath Vaibhav
WhatsApp Group Join Now
Telegram Group Join Now

ಚಿಕ್ಕೊಡಿ :- ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪ್ರಜ್ವಲ್ ರೇವಣ್ಣ ಸೆಕ್ಸ್ ಕ್ಯಾಂಡಲ್ ಹಗರಣದಲ್ಲಿ ಆರೋಪಿಯಾಗಿ ವಿದೇಶಕ್ಕೆ ಪರಾರಿಯಾಗಿದ್ದು ಸುಮಾರು 13 ದಿನ ಆಗಿದ್ರು ಹಾಗೂ ಎಸ್ಐಟಿಯಿಂದ ದೇವೇಗೌಡ್ರು ಕುಟುಂಬದ ರೇವಣ್ಣ ಅವರಿಗೆ ನೋಟಿಸ್ ಕಳಿಸಿದ್ರು, ಪ್ರಜ್ವಲ್ ರೇವಣ್ಣ ಅವರು ಬರದೇ ಇರೋ ಕಾರಣ ಕಾಂಗ್ರೆಸ್ ಸರ್ಕಾರ 196 ದೇಶಗಳಿಗೆ ಬ್ಲೂ ಕಾರ್ನರ್ ನೋಟಿಸ್ ಕಳಿಸಿದ್ದಾರೆ, ಆದರೆ ಕೇಂದ್ರ ಬಿಜೆಪಿ ಸರ್ಕಾರದ ವಿದೇಶ ಸಚಿವರು ಮತ್ತು ಪ್ರಧಾನಮಂತ್ರಿಯಾದ ಮೋದಿಜಿ ಅವರು ಇಲ್ಲಿವರೆಗೂ ಪ್ರಜ್ವಲ್ ರೇವಣ್ಣ ವಿರುದ್ಧ ಏನು ಕ್ರಮವನ್ನು ತೆಗೆದುಕೊಂಡಿದ್ದಾರೆ ದೇಶ ಜನರಿಗೆ ಮತ್ತು ರಾಜ್ಯದ ಜನರಿಗೆ ಉತ್ತರ ಕೊಡಬೇಕಾಗಿದೆ.

2. ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮಹಿಳೆಯರ ಮೇಲೆ ಲೈಂಗಿಕ ಹಗರಣ ಮಾಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಶೀಘ್ರದಲ್ಲಿ ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುವುದನ್ನು ಬಿಟ್ಟು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ನಮ್ಮ ಹೆಣ್ಣು ಮಕ್ಕಳ ಪರವಾಗಿ ಸಾಂತ್ವಾನ ಮಾಡುವುದನ್ನು ಬಿಟ್ಟು ಎಸ್ಐಟಿ ತನಿಖೆಯನ್ನು ದಾರಿ ತಪ್ಪಿಸುವುದಕ್ಕೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರನ್ನು ಮತ್ತು ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಅವರನ್ನು ಟೀಕೆ ಮಾಡುವುದು ಸರಿಯೇ? ಆರೋಪಿಯಾದ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುವ ಹೇಳಿಕೆಯನ್ನು ಕೊಡುತ್ತಿದ್ದಾರೆ ಮಾಜಿ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕಾಗಿದೆ. ಇವರು ರಾಜ್ಯದ ಮಣ್ಣಿನ ಮಗ ಅಂತ ಹೇಳಿ ಕುಮಾರಸ್ವಾಮಿಯವರು ದಾರಿ ತಪ್ಪಿದ್ದಲ್ಲದೆ ತಮ್ಮ ಅಣ್ಣನ ಮಗನಾದ ಪ್ರಜ್ವಲ್ ರೇವಣ್ಣ ಅವರನ್ನು ದಾರಿ ತಪ್ಪಿಸಿ ಇವತ್ತು ರಾಜ್ಯದ ಘನತೆ, ಗೌರವವನ್ನು ಹಾಳು ಮಾಡುತ್ತಿದ್ದಾರೆ. ಇಡೀ ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ದೊಡ್ಡ ಲೈಂಗಿಕ ಹಗರಣ ಆಗಿದೆ. ಇಂತಹ ನೀಚ ಕೃತ್ಯಕ್ಕೆ ದೇವೇಗೌಡ ಕುಟುಂಬವೇ ಕಾರಣವಾಗಿದೆ.

3. ಲೈಂಗಿಕ ಹಗರಣಕ್ಕೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ನಂತಹ ಆರೋಪಿಯನ್ನು ಇಂದು ಕೇಂದ್ರ ಬಿಜೆಪಿ ಸರ್ಕಾರ ರಕ್ಷಣೆ ಮಾಡುತ್ತಿದ್ದಾರೆ ಮತ್ತು ಹಲವು ಬಿಜೆಪಿ ನಾಯಕರುಗಳು ಎಸ್ ಐ ಟಿ ತನಿಖೆಯನ್ನು ವಿರೋಧಿಸುತ್ತಿದ್ದಾರೆ. ಇಂದು ಬಿಜೆಪಿ ಸರ್ಕಾರವು ಲೈಂಗಿಕ ದೌರ್ಜನ್ಯ ಒಳಗಾದ ಮಹಿಳೆಯರ ಪರ ಧ್ವನಿ ಎತ್ತುತ್ತಿಲ್ಲ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕಾಗಿದೆ.

ವರದಿ :- ಪ್ರತೀಕ್ ಚಿಟಗಿ 

WhatsApp Group Join Now
Telegram Group Join Now
Share This Article
error: Content is protected !!