Ad imageAd image

ಕೇಂದ್ರ ಹೂಕುಮ್ ಶಾಹಿ ಸರ್ಕಾರ ಬಿಜೆಪಿ ವಿರುದ್ಧ ಹರಿ ಹಾಯದ ಶರದ ಪವಾರ.

Bharath Vaibhav
ಕೇಂದ್ರ ಹೂಕುಮ್ ಶಾಹಿ ಸರ್ಕಾರ ಬಿಜೆಪಿ ವಿರುದ್ಧ ಹರಿ ಹಾಯದ ಶರದ ಪವಾರ.
WhatsApp Group Join Now
Telegram Group Join Now

ನಿಪ್ಪಾಣಿ:- ಸಧ್ಯ ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆ ತುಂಬಾ ಮಹತ್ವದ್ದು ಆಗಿದ್ದು ಸ್ವಾತಂತ್ರ ಸಿಕ್ಕ ನಂತರ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ಇವರ ಸಮಯದಲ್ಲಿ ಜನರ ಪರ ಸರ್ಕಾರ ಇದ್ದವು.
ಈಗ ಮಾತ್ರ ಸದ್ಯದಲ್ಲಿ ನರೇಂದ್ರ ಮೋದಿ ಭಾಜಪ ಸರ್ಕಾರ ಜನರಪರ ಸರ್ಕಾರ ಅಲ್ಲ ಹುಕುಮುಶಾಹಿ ಸರ್ಕಾರ ಆಗಿದೆ.

2014 ಸಾಲಿನಲ್ಲಿ ಮೋದಿ ಸರ್ಕಾರ ಅನೇಕ ಭರವಸೆ ನೀಡಿದ್ದರು ಈ ವರೆಗೂ ಯಾವುದೆ ರೀತಿಯ ಭರವಸೆ ಈಡೇರಿಸಿಲ್ಲ ಎಂದು ಮಾಜಿ ಕೇಂದ್ರ ಮಂತ್ರಿ ಶರದ ಪವಾರ ಆರೋಪಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ದೀಪಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಿದರು.

 

2014 ರಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಲಿಂಡರ್,ಸೇರಿದಂತೆ ಇನ್ನಿತರ ದಿನಸಿ ವಸ್ತುಗಳ ಬೆಲೆ ಕಡಿಮೆ ಇತ್ತು ಆದರೆ ಇವತ್ತು ಮೋದಿ ಸರ್ಕಾರ ತುಂಬಾ ಏರಿಕೆ ಮಾಡಿದ್ದಾರೆ ಇದರಿಂದ ದಿನ ನಿತ್ಯ ದುಡಿದು ತಿನ್ನುವವರ ಬಡ ಜನರ ಮೇಲೆ ಬಾರಿ ಪರಿಣಾಮ ಉಂಟಾಗಿದೆ ಅಲ್ಲದೆ ರೈತರಪರ ಸೂಕ್ತ ಕಾಳಜಿ ವಹಿಸುತ್ತಿಲ್ಲದ ಕಾರಣ ರೈತರು ಆತ್ಮ ಹತ್ಯಗೆ ಶರಣಾಗುತ್ತಿದ್ದಾರೆ ಹೆಸರಿಗೆ ಮಾತ್ರ ಯೋಜನೆಗಳಿವೆ

ಅದರಿಂದ ರೈತರಿಗೆ ಕೃಷಿಗೆ ಬೇಕಾದ ಅನುಕೂಲಗಳಿಲ್ಲ ರೈತರ ಸಾಲ ಮನ್ನಾ ಮಾಡಿಲ್ಲ ಹೀಗಾಗಿ ಸರ್ವ ಸಾಮಾನ್ಯ ಜನರು ಜೀವನ ನಡೆಸುವುದು ತುಂಬಾ ಕಷ್ಟಕರ ಆಗಿದೆ ಎಂದು ಹೇಳಿದ ಶಾರದ ಪವಾರ ನಮ್ಮ ಇಂಡಿಯಾ ವಕ್ಕುಟ್ಟದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ವಿವಿಧ ಗಣ್ಯರು ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಣೆ ನೀಡಿದರು ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನು ಕೆಲವು ಜನರಪರ್ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ನೀಡಿ ಲೋಕಸಭೆಗೆ ಪ್ರಿಯಾಂಕಾ ಜಾರಕಿಹೋಳಿ ಅವರನ್ನು ಆಯ್ಕೆ ಮಾಡಿ ಎಂದು ಜನರಲ್ಲಿ ವಿನಂತಿಸಿದರು.

ಯುವ ಮುಖಂಡ ಉತ್ತಮ ಪಾಟೀಲ್ ಉತ್ತಮ ಪಾಟೀಲ ಮಾತನಾಡಿ ಕುಮಾರಿ ಪ್ರಿಯಾಂಕಾ ಜಾರಕಿಹೋಳಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ನೀಡಿ ಲೋಕಸಭೆಗೆ ಆಯ್ಕೆ ಮಾಡಿ ಎಂದು ಜನರಲ್ಲಿ ವಿನಂತಿಸಿದರು.

ಈ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೋಳಿ, ಸಚಿವ ಡಿ ಸುಧಾಕರ್, ಗುಜರಾತ ಶಾಸಕ ಜಿಗೆನೇಶ ಮೇವಾಣಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ವೀರಕುಮಾರ ಪಾಟೀಲ, ಲಕ್ಷ್ಮಣ್ ರಾವ್ ಚಿಂಗಳೆ, ಸುಭಾಷ್ ಜೋಶಿ,ಅಶೋಕಕುಮಾರ್ ಅಸೋದೆ, ರೋಹನ ಸಾಳವೆ, ರಾಜೇಶ ಕದಂ, ರಾಜೇಂದ್ರವಡ್ಡರ , ಕಾಂಗ್ರೆಸ್ ಪಕ್ಷದ ಮುಖಂಡರು ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ನಾಗರಸೇವಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾದ್ಯಕ್ಷ್ಕರು, ಸದಸ್ಯರು , ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು, ಯುವಕರು ಸಾವಿರಾರು ಜನರು ಉಪಸ್ಥಿತರಿದ್ದರು

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!