Ad imageAd image

ಶಿಕ್ಷಣ ಇಲಾಖೆಯ ಆಯುಕ್ತರ ಆದೇಶಕ್ಕೂ ಕಿಮ್ಮತ್ತು ನೀಡದ ಪ್ರಭಾರಿ ಮುಖ್ಯ ಗುರುಗಳು

Bharath Vaibhav
ಶಿಕ್ಷಣ ಇಲಾಖೆಯ ಆಯುಕ್ತರ ಆದೇಶಕ್ಕೂ ಕಿಮ್ಮತ್ತು ನೀಡದ ಪ್ರಭಾರಿ ಮುಖ್ಯ ಗುರುಗಳು
WhatsApp Group Join Now
Telegram Group Join Now

ರಾಯಚೂರು :ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ, ಪೋಷಕರ-ಶಿಕ್ಷಕರ ಸಭೆಯನ್ನು ಸರ್ಕಾರದ ಸುತ್ತೋಲೆಯಂತೆ 07/03/2026 ರಂದು ಪೋಷಕರ-ಶಿಕ್ಷಕರ ಮಹಾಸಭೆ ನಡೆಸಬೇಕಾಗಿತ್ತು.

ಆದರೆ ಆಯುಕ್ತರ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಿ ಪೋಷಕರ ಶಿಕ್ಷಕರ ಸಭೆಯನ್ನು ಮಾಡದ ಪ್ರಭಾರಿ ಮುಖ್ಯ ಗುರುಗಳ ನಡೆಯನ್ನು ಸ್ವಾಮಿ ವಿವೇಕಾನಂದ ಯುವಶಕ್ತಿ ಯುವಕ ಸಂಘ(ರಿ) ಅರೋಲಿ ತೀವ್ರವಾಗಿ ಖಂಡಿಸುತ್ತೇವೆ ಇವರ ವಿರುದ್ಧ  ಕಠಿಣ ಕ್ರಮ ಜರುಗಿಸಬೇಕೆಂದು ಈ ಮೂಲಕ BEO ಮತ್ತು DDPI ಅವರಿಗೆ ಆಗ್ರಹಿಸುತ್ತೇವೆ.ಎಂದು ಗ್ರಾಮಸ್ಥರು ಮಾದ್ಯಮಕ್ಕೆ
ಪ್ರತಿಕ್ರಿಯಿಸಿದರು. ವರದಿಗಾರರು ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!