ಮಾನ್ವಿ : ನಗರದ ಹೃದಯ ಭಾಗದಲ್ಲಿರುವ ಪುರಸಭೆ ಅಧ್ಯಕ್ಷರ ಲಕ್ಷ್ಮಿ ಗಂಡ ವೀರೇಶ್ ತಮ್ಮ ವಾರ್ಡ್‌ನಲ್ಲಿ ಸ್ವಚ್ಛತೆ ಮಾಯವಾಗಿದೆ. ರಸ್ತೆ ಬದಿಯಲ್ಲಿ ಕಸದ ರಾಶಿಗಳು ತುಂಬಿದ್ದು, ದುರ್ನಾತ ಬೀರುತ್ತಿವೆ. ಕಸದ ತೊಟ್ಟಿಗಳ ಕೊರತೆ ಮತ್ತು ಕಸ ವಿಲೇವಾರಿ ವಾಹನಗಳ ಅನಿಯಮಿತ ಸಂಚಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ
ಕಸದ ರಾಶಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳು ಹರಡುವ ಸಾಧ್ಯತೆ ಇದ್ದು, ಈ ಬಗ್ಗೆ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು
ಲಕ್ಷ್ಮಿ ಗಂಡ ವೀರೇಶ್ ಅಧ್ಯಕ್ಷರ ನಿರ್ಲಕ್ಷ್ಯವೇ ಕಾರಣ ಪುರಸಭೆ ಅಧ್ಯಕ್ಷರ ವಾರ್ಡ್‌ನಲ್ಲೇ ಈ ರೀತಿಯ ಪರಿಸ್ಥಿತಿ ಇರುವುದು ವಿಷಾದನೀಯ. ಅಧ್ಯಕ್ಷರು ತಮ್ಮ ವಾರ್ಡ್‌ನ ಬಗ್ಗೆ ಗಮನ ಹರಿಸುತ್ತಿಲ್ಲ ಇನ್ನು ಬೇರೆ ಕಡೆಯ ಪರಿಸ್ಥಿತಿ ಏನಾಗಿರಬಹುದು ಕಸದ ಗಾಡಿ ಎಂಟು ಹತ್ತು ದಿನಕೊಮ್ಮೆ ಬರುತ್ತಿದೆ ಜನರು ಕಸವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ದುರ್ನಾತ ಹುಳಗಳು ಹುಟ್ಟುತ್ತಿರುವುದು ಕಾಣುತ್ತಿದೆ ಅಧ್ಯಕ್ಷರ ಒಂದು ವೇಳೆ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜನರು ನಿಮ್ಮ ಮನೆಯಲ್ಲೇ ಕಸವನ್ನು ಹಾಕುವುದು ಖಂಡಿತ ಪುರಸಭೆ ಅಧ್ಯಕ್ಷ ಲಕ್ಷ್ಮಿ ವೀರೇಶ್ ಕೂಡಲೇ ಎಚ್ಚೆತ್ತುಕೊಂಡು ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸಬೇಕು. ಕಸದ ತೊಟ್ಟಿಗಳನ್ನು ಹೆಚ್ಚಿಸಬೇಕು ಮತ್ತು ಕಸ ವಿಲೇವಾರಿ ವಾಹನಗಳನ್ನು ನಿಯಮಿತವಾಗಿ ಓಡಿಸಬೇಕು
ವರದಿ: ಶಿವ ತೇಜ