ತಿಲಕವಾಡಿ ಪೊಲೀಸರಿಂದ ಕಳ್ಳನ ಬಂಧನ. 4 ಲಕ್ಷ ಮೌಲ್ಯದ ಬಂಗಾರದ ಆಭರಣ ಜಪ್ತು.
ದಿನಾಂಕ 13-4-2024 ಹಾಗು 21.4.2024 ರಂದು ತಿಲಕವಾಡಿ ಮಹಾವೀರ್ ಭವನ ಹಾಗೂ ಸಿಟಿ ಹಾಲ್ ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ
ಆರೋಪಿ- ಸೋಹೈಲ್ ಮೌಲಾ ತಾಶಾವಾಲೆ (26 ವರ್ಷ) ಸಾ.ಉಜ್ವಲ ನಗರ ಬೆಳಗಾವಿ
ಈತನನ್ನು ಶ್ರೀ ಕಪಿಲ್ ದೇವ್ ಗಡದ ಪಿ.ಐ ತಿಲಕವಾಡಿ ಠಾಣೆ ಹಾಗೂ ಅವರ ತಂಡ ಪತ್ತೆ ಮಾಡಿ, ಅವನು ಕಳ್ಳತನ ಮಾಡಿದ 4 ಲಕ್ಷ 10,000 ಮೌಲ್ಯದ ಒಟ್ಟು 58.4 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣಗಳಲ್ಲಿಯ ಆರೋಪಿತನನ್ನು ಬಂಧಿಸುವಲ್ಲಿ ಶ್ರಮಿಸಿದ ಪಿಐ ತಿಲಕವಾಡಿ ಹಾಗೂ ಅವರ ತಂಡವನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿಗಳು
ಶ್ಲಾಘಿಸಿರುತ್ತಾರೆ.
ವರದಿ ಮಹಾಂತೇಶ ಎಸ್ ಹುಲಿಕಟ್ಟಿ