ಸೇಡಂ:- ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರೇ ನಮ್ಮ ದೇಶದಲ್ಲಿ ನಿಮ್ಮಿಂದ ಮತ್ತು ನಿಮ್ಮ ಕೇಂದ್ರ ಸರಕಾರದಿಂದ ಏನ ಅನ್ಯಾಯ ? ಅಯ್ಯಯ್ಯೋ ಏನ್ ಅನ್ಯಾಯ ? ಒಬ್ಬ ಹಿಂದುಳಿದ ವರ್ಗದ ಮುತ್ಸದ್ದಿ ರಾಜಕೀಯ ನಾಯಕನ ಏಳಿಗೆ ಸಹಿಸದ ತಾವು ಮತ್ತು ತಮ್ಮ ಸರ್ಕಾರದ ಕೆಲವು ಅಯೋಗ್ಯ ಮಂತ್ರಿ ಗಳು ಸೇರಿ ಕೊಂಡು ಕರ್ನಾಟಕದ ರಾಜ್ಯಪಾಲರ ಮೂಲಕ ಏನು ಮಾಡಬೇಕು .
ಅಂದು ಕೊಂಡಿರೀ ? ಕರ್ನಾಟಕದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರವನ್ನು ಅತ್ಯಂತ ಶ್ರೇಷ್ಠ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಇಕಟಿನಲಿ ಸಿಕ್ಕಿ ಹಾಕಿಸಿ ಅವರನ್ನು ರಾಜಕೀಯದಿಂದ ಮುಗಿಸುವ ನಿಮಗಳ ದುಷ್ಟ ಬುದ್ಧಿಗೆ ಏನು ಅನ್ನಬೇಕು ? ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಸರಿ ಸಮಾನವಾಗಿ ನೋಡುವ ಸ್ಥಿತಿ ಇಲ್ಲದಂತಾಗಿದೆ .
ದೇಶ ಆಳುವ ಪ್ರಧಾನಮಂತ್ರಿಗಳ ಆದರ್ಶತನದ ಬುದ್ದಿನ ಇದು ? ಪ್ರಧಾನ ಮಂತ್ರಿಗಳ ಹುದ್ದೆ ಅದರ ಗೌರವ ಘನತೆ ಏನು ಅನ್ನುವುದು ಗೊತ್ತಾ ನಿಮಗೆ ,ಇಲ್ಲ ಸಲ್ಲದನು ನಿಮಗೆ ಸುಳ್ಳು ಹೇಳುವ ಮಂತ್ರಿಗಳ ಮಾತು ಕೇಳಿ ದೇಶದಲ್ಲಿ ಹೋಗೆತನದ ರಾಜಕಾರಣ ಮಾಡುತ್ತಿರುವುದು ನಿಮ್ಮಗೆ ಮತ್ತು ನಿಮ್ಮ ಹುದ್ದೆಗೆ ಸೋಭೆಯಲ್ಲ ಕೇಂದ್ರ ಸರ್ಕಾರ ಮತ್ತಿ ಗೆಟ್ಟು ಹೋಗಿದ್ದೆ, ದೇಶದ ಅಭಿವೃದ್ಧಿಯ ವಿಷಯದಲ್ಲಿ ಸಗಲಿ, ದೇಶದ ಬಡವರ ಸಮಸ್ಯೆ ಕಾಣುತ್ತಿಲ್ಲವ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಇನ್ನೂ ಕನಸಾಗಿ ಉಳಿದಿದೆ.
ದೇಶದ ಜನ ಮೋದಿಜಿ ಯವರ ಮೇಲೆ ಬಹುದೊಡ್ಡ ನಂಬಿಕೆ ಇಟ್ಟುಕೊಂಡಿದ್ದರು ಆದರೆ ಇಂದು ನೀವು ಮಾಡುತ್ತಿರುವುದು ಏನು ? ಇದು ಸರಿ ಅನಿಸುತಿದೆಯೇ ? ,ಆಯಾ ರಾಜ್ಯಗಳಲ್ಲಿ ಒಳ್ಳೆ ಆಡಳಿತ ನಡೆಸಿರುವ ಬೇರೆ ಬೇರೆ ಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಸರ್ವನಾಶ ಮಾಡುವುದು ಎಷ್ಟು ಸರಿ ಅನಿಸುತಿದೆ ನಿಮಗೆ, ದುರುದ್ದೇಶದಿಂದ, ಅಲ್ಲಿನ ಮುಖ್ಯಮಂತ್ರಿಗಳನ್ನು ಖೇಡಿಗೆ ಹಾಕುವುದು ಅವರ ಹೆಸರನು ತೇಜುವದೆ ಮಾಡುವುದು ಸರ್ಕಾರವನ್ನು ಬೀಳಿಸುವುದು ಇವು ಕೇಂದ್ರ ಸರ್ಕಾರದ ಸಾಧನೆಗಳು, ಶ್ರೀ,ನಾಗೇಶ್ವರರಾವ್ ಮಾಲಿ ಪಾಟೀಲ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅವರು ವ್ಯಕ್ತಪಡಿಸಿದರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.