ಬೆAಗಳೂರು: ಆರ್‌ಸಿಬಿ ತಂಡವು ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ.
ಕಳೆದ ರಾತ್ರಿ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಗಿದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಲಕ್ನೋ ಸೂಪರ್ ಗೇಂಟ್ಸ್ ತಂಡವನ್ನು ೫ ವಿಕೆಟ್‌ಗಳಿಂದ ಮಣಿಸಿತು.
ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ತಾನಾಡಿರುವ ೫ ಪಂದ್ಯಗಳಿAದ ೪ ರಲ್ಲಿ ಗೆಲುವು ೧ ರಲ್ಲಿ ಸೋಲು ಒಟ್ಟು ೮ ಪಾಯಿಂಟ್‌ಗಳೊAದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.
ರಾಜಸ್ತಾನ್ ರಾಯಲ್ಸ್ ತಂಡವು ಕೂಡ ಇದೇ ತೆರನಾದ ಸಾಧನೆಯಿಂದ ೫ ಪಂದ್ಯಗಳಿAದ ೮ ಪಾಯಿಂಟ್‌ಗಳನ್ನು ಪಡೆದಿದೆಯಾದರೂ ಆರ್‌ಸಿಬಿ ರನ್ ಸರಾಸರಿ ಉತ್ತಮವಾಗಿರುವುದರಿಂದ ಆರ್‌ಸಿಬಿ ೧ ನೇ ಸ್ಥಾನಕ್ಕೆ ಜಿಗಿದಿದೆ.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ ೨೦ ಓವರುಗಳಲ್ಲಿ ೧೪೬
ಮಿಚೆಲ್ ಮಾರ್ಷ್ ೪೦ ( ೩೨ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಮುಕುಲ್ ಚೌಧರಿ ೩೯ (೨೮ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಆಯುಷ್ ಬದೋನಿ ೩೮ (೨೪ ಎಸೆತ, ೪ ಬೌಂಡರಿ, ೧ ಸಿಕ್ಸರ್)
ರಾಷಿಕ್ ದಾರ್ ೨೪ ಕ್ಕೆ ೪, ಭುವನೇಶ್ವರ ಕುಮಾರ್ ೨೭ ಕ್ಕೆ ೩,
ಜೋಶ್ ಹೆಜಲ್‌ವುಡ್ ೨೦ ಕ್ಕೆ ೧
ಆರ್‌ಸಿಬಿ ೧೫.೧ ಓವರುಗಳಲ್ಲಿ ೫ ವಿಕೆಟ್‌ಗೆ ೧೪೯
ವಿರಾಟ್ ಕೊಹ್ಲಿ ೪೯ ( ೩೪ ಎಸೆತ, ೬ ಬೌಂಡರಿ, ೧ ಸಿಕ್ಸರ್)
ರಜತ್ ಪಟಿದಾರ ೨೭ (೧೩ ಎಸೆತ, ೧ ಬೌಂಡರಿ, ೩ ಸಿಕ್ಸರ್)
ಅವೇಶ್ ಖಾನ್ ೨೩ ಕ್ಕೆ ೨.
ಪಂದ್ಯ ಶ್ರೇಷ್ಠ: ಜೋಷ್ ಹೆಜಲ್‌ವುಡ್_ ೪-೦-೨೦-೧
ಮತ್ತೇ ಗೆದ್ದು ಬೀಗಿದ ಆರ್‌ಸಿಬಿ: ಪಾಯಿಂಟ್ ಪಟ್ಟಿಯಲ್ಲೂ ನಂ.೧




