ಸಂಜೆ ಆದ್ರೆ ಸಾಕು ಹಲವರು ಪಾನಿಪುರಿ ತಿನ್ನಲು ಇಷ್ಟ ಪಡ್ತಾರೆ. ಆದರೆ ಪಾನಿಪುರಿ ಮಾಡುವ ವಿಧಾನ ತಿಳಿದರೆ ಇನ್ನೊಮ್ಮೆ ನೀವು ಎಂದಿಗೂ ಪಾನಿಪುರಿ ತಿನ್ನುವುದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಾನಿಪುರಿ ಮಾಡುವ ವಿಧಾನದ ಕುರಿತು ತೋರಿಸಲಾಗಿದ್ದು, ಪಾನಿಪುರಿ ಮಾಡಲು ಹಿಟ್ಟು ಹದ ಬರಲು ಕಾಲಿನಿಂದ ತುಳಿದು ಜೊತೆಗೆ ಪಾನೀಪುರಿಯ ಪಾನಿಗೆ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರವನ್ನು ಬಳಸುತ್ತಿರುವ ಶಾಕಿಂಗ್ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆ ಜಾರ್ಖಂಡ್‌ನ ಪಾನಿಪುರಿಯ ಶಾಕಿಂಗ್ ವೀಡಿಯೊ ಈಗ ವಿವಾದವನ್ನು ಹುಟ್ಟುಹಾಕಿದೆ. ಇಬ್ಬರು ವ್ಯಕ್ತಿಗಳು ತಮ್ಮ ಪಾದಗಳಿಂದ ಪಾನಿಪುರಿ ಹಿಟ್ಟನ್ನು ಹದ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಇಬ್ಬರೂ ಅಂಗಡಿಕಾರರು ಉತ್ತರ ಪ್ರದೇಶದರಾಗಿದ್ದು, ಝಾನ್ಸಿ ಜಿಲ್ಲೆಯ ಸೋಮಾ ಗ್ರಾಮದ ಅರವಿಂದ್ ಯಾದವ್, ಹಾಗೂ ಜಲೌನ್ ಜಿಲ್ಲೆಯ ನೂರ್ಪುರ್ ಗ್ರಾಮದ ಸತೀಶ್ ಕುಮಾರ್ ಶ್ರೀವಾಸ್ತವ ಬಂಧಿತ ಆರೋಪಿಗಳಾಗಿದ್ದಾರೆ.