Ad imageAd image

ಯತ್ನಾಳ್ ನಮ್ಮ ಲಡ್ಡು ಮುತ್ಯಾರಿಂದಗೇ : ವಚನಾನಂದ ಶ್ರೀ 

Bharath Vaibhav
WhatsApp Group Join Now
Telegram Group Join Now

ಬಾಗಲಕೋಟೆಯಲ್ಲಿ ಲಡ್ಡು ಮುತ್ಯಾ ಎಂಬ ಮಹಾನ್ ಸಂತರಿದ್ದರು. ಅವರ ವಿಶೇಷತೆಯೆಂದರೆ ಯಾರಿಗೆಲ್ಲಾ ಅವರು ಬೈಯ್ಯುತ್ತಿದ್ದರೋ,,ಹೊಡೆಯುತ್ತಿದ್ದರೋ ಅವರಿಗೆಲ್ಲಾ ಒಳ್ಳೆಯದೇ ಆಗುತ್ತಿತ್ತು. ಕೆಲವರ ವ್ಯಾಪಾರ ವಹಿವಾಟು ಹೆಚ್ಚಾಗುತ್ತಾ ಹೋಯಿತು,ಇನ್ನೂ ಕೆಲವರು ಅಗರ್ಭ ಶ್ರೀಮಂತರಾದರು, ರಾಜಕೀಯ ರಂಗದಲ್ಲಿ ಉನ್ನತ ಹುದ್ದೆ ಅಲಂಕರಿಸಿದರು.

ಜನರೆಲ್ಲರೂ ಅವರ ಬೈಗುಳಕ್ಕಾಗಿ ಸಾಲಾಗಿ ನಿಂತು ಗಂಟೆಗಟ್ಟಲೇ ಕಾಯುತ್ತಿದ್ದರು.

ಅವರ ಪ್ರತಿ ಬೈಗುಳದ ಶಬ್ಧಗಳನ್ನು ಪ್ರಸಾದವೆಂದು ಭಾವಿಸುತ್ತಿದ್ದರು.

ಅದೇ ರೀತಿ ನಮ್ಮ ಯತ್ನಾಳ ಮುತ್ಯಾ ರವರು

ಯಾರಿಗೆಲ್ಲಾ ಟೀಕೆ ಟಿಪ್ಪಣಿ ಮಾಡಿದ್ದಾರೋ ಅವರೆಲ್ಲರಿಗೂ ಒಳ್ಳೆಯದೇ ಆಗಿದೆ.

*ಯಡಿಯೂರಪ್ಪನವರನ್ನು ಟೀಕೆ ಮಾಡಿದರು ಅವರು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದರು,

*ವಿಜಯೇಂದ್ರ ಅವರನ್ನು ಹಿಗ್ಗಾಮುಗ್ಗಾ ಬೈದರು ಅದಕ್ಕೆ ಅವರು ರಾಜ್ಯಾಧ್ಯಕ್ಷರಾದರು,

*ಸಿದ್ಧರಾಮಯ್ಯನವರನ್ನು ಬೈದರು ಅದಕ್ಕೆ ಅವರು ಎರಡನೆಯ ಬಾರಿಯೂ ಮುಖ್ಯಮಂತ್ರಿಗಳಾದರು,

*ಡಿಕೆ ಶಿವಕುಮಾರ ಅವರ ಮೇಲೆ ಟೀಕಾಪ್ರಹಾರ ಮಾಡಿದರು ಅದಕ್ಕೆ ಅವರು ಉಪಮುಖ್ಯಮಂತ್ರಿಗಳಾದರು,

*2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ನಲವತ್ತರ ಗಡಿದಾಟುವುದಿಲ್ಲವೆಂದರು ಅದು ಭರ್ಜರಿ 135 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆ ಮಾಡಿತು.

ಇದನೆಲ್ಲವನ್ನು ಗಮನಿಸಿದಾಗ ಯತ್ನಾಳ ಮುತ್ಯಾ ಅವರು ಇನ್ನೂ ಹೆಚ್ಚೆಚ್ಚು ಟೀಕೆ ಟಿಪ್ಪಣೆ ಮಾಡಬೇಕು, ಅದರಿಂದ ನಮ್ಮ ಪೀಠಕ್ಕೆ ,ಸಮುದಾಯಕ್ಕೆ ಹೆಚ್ಚೆಚ್ಚು ಒಳ್ಳೆಯದಾಗುತ್ತದೆ ಎಂಬ ಭಾವನೆ ನಮ್ಮದಾಗಿದೆ.ಆದ್ದರಿಂದ ಯತ್ನಾಳ್ ಮುತ್ಯಾ ಅವರು ಟೀಕೆ ಟಿಪ್ಪಣೆ ಕಾಯಕವನ್ನು ನಿರಂತರವಾಗಿ ಮುಂದುವರಿಸಲೆಂದು ಆಶಿಸುತ್ತೇವೆ.

ವಂದನೆಗಳೊಂದಿಗೆ,

ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

WhatsApp Group Join Now
Telegram Group Join Now
Share This Article
error: Content is protected !!