Ad imageAd image

ರೈತರ ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿ * ಸ್ಥಳದಲ್ಲಿ ಹಮ್ಮಿಕೊಂಡ *ಕೂಲಿಕಾರರ ಮತದಾನ ಜಾಗೃತಿ ಅಭಿಯಾನ

Bharath Vaibhav
ರೈತರ ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿ * ಸ್ಥಳದಲ್ಲಿ ಹಮ್ಮಿಕೊಂಡ *ಕೂಲಿಕಾರರ ಮತದಾನ ಜಾಗೃತಿ ಅಭಿಯಾನ
WhatsApp Group Join Now
Telegram Group Join Now

ಇಲಕಲ್:-  ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ.07ರಂದು ನಡೆಯುವ ಮತದಾನದ ಹಿನ್ನಲೆ ನರೇಗಾ ಕೂಲಿಕಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಚಟುವಟಿಕೆಗಳಡಿ ಏ.17ರಂದು ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮ‌ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಲಕುಂದಿಗ್ರಾಮದಲ್ಲಿ ನರೇಗಾದಡಿ ಪ್ರಗತಿಯಲ್ಲಿದ್ದ ರೈತರ ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿ * ಸ್ಥಳದಲ್ಲಿ ಹಮ್ಮಿಕೊಂಡ *ಕೂಲಿಕಾರರ ಮತದಾನ ಜಾಗೃತಿ ಅಭಿಯಾನ ಕ್ಕೆ ಕೂಲಿ ಕಾರ್ಮಿಕರ ಸಹಯೋಗದಲ್ಲಿ ಮಾನ್ಯ ತಾಲೂಕ ಪಂಚಾಯತ ಕಾರ್ಯನಿರ್ವಹಕಾಧಿಕಾರಿಳು ಶ್ರೀ ಎಂ ದೇಶಪಾಂಡೆ ಸರ್ ರವರು ನರೇಗಾ ಯೋಜನೆಯಲ್ಲಿ ದೊರಕುವ ಕಾಮಗಾರಿಗಳ ಬಗ್ಗೆ ವಲಸೆ ಯಾಕ್ರೀ ನಿಮ್ಮೂರಲ್ಲಿಯೇ ಉದ್ಯೋಗ ಖಾತ್ರಿ ಅಭಿಯಾನ ಮೂಲಕ ಏಪ್ರಿಲ್ 1 ರಿಂದ ಮೇ ಅಂತ್ಯದವರೆಗೂ 2 ತಿಂಗಳ ನಿರಂತ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಹೇಗೆ ಕೆಲಸ ಮಾಡುತ್ತಿರೀ ಎಂಬುದರ ಮೇಲೆ ನಿಮಗೆ ಮುಂದಿನ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಎನ್ಎಂಆರ್ ನಲ್ಲಿ ಹೆಸರು ಇದೇ ಇಲ್ಲ ಮೊದಲು ಪರಿಶಿಲಿಸಿ ನಂತರ ಕೆಲಸಕ್ಕೆ ಬರಬೇಕು. ಒಂದು ವೇಳೆ ಹೆಸರು ಇಲ್ಲದೆ ಕೆಲಸಕ್ಕೆ ಬಂದರೆ ಹಣ ಬರುವುದಿಲ್ಲ. ಜತೆ ಕೂಲಿಕಾರರು ಎರಡು ಬಾರಿ ಕಡ್ಡಾಯವಾಗಿ ಹಾಜರಿ ಹಾಕಿಸಬೇಕು.

ಅದರಲ್ಲಿ ಒಂದು ಹಾಜರಿ ಹಾಕಿಸದಿದ್ದರೂ ಹಣ ಬರುವುದಿಲ್ಲ. ಕೂಲಿಕಾರರು ಅಳತೆಗೆ ತಕ್ಕಂತೆ ಪಡ ಕಡಿಯಬೇಕು. ನೀವು ಕಡಿಯದಿದ್ದರೆ ಕೂಲಿ ಅಳತೆ ಎಷ್ಟು ಇರುತ್ತದೆ ಅಷ್ಟೇ ಹಣ ಜಮಾ ಮಾಡುತ್ತಾರೆ ಸರಿಯಾಗಿ ಕೆಲಸಮಾಡಬೇಕು ಎಂದು ತಿಳಿಸಿದರು.

ಬೇಸಿಗೆಯಲ್ಲಿ ಯಾರು ಗುಳೇ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಮಳೆಯಾಗುವವರೆಗೂ ನಿಮಗೆ ನಿರಂತರ ಕೆಲಸ ನೀಡಲಾಗುವುದು. ನೀವು ಸರಿಯಾಗಿ ಕೆಲಸ ಮಾಡಬೇಕು. ಬೇಸಿಗೆ ಅವಧಿಯ ಕನಿಷ್ಟ ೬೦ ದಿನಗಳನ್ನು ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದರೆ ೨೦೯೪೦ ರೂಪಾಯಿ ಸಿಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸಂಕಷ್ಟವನ್ನು ನಿಗೀಸಿಕೊಳ್ಳುವ ಕೆಲಸವಾಗುತ್ತದೆ ಎಂದು ತಿಳಿಹೇಳಿದರು.

ಕುರಿತು ಮಾತನಾಡಿದರು ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರಪಡಿಸಲು ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ, ಯಾರೊಬ್ಬರೂ ಮತಚಲಾಯಿಸದೆ ಹೊರಗುಳಿಯಬಾರದು ಎಂದು ಮತದಾನದ ಮಹತ್ವ ಕುರಿತು ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಹೆಚ್ ವೈ ಆವಿನ್ ಸರ್ ಪ್ರತಿಜ್ಞಾ ವಿಧಿ ಬೋಧಿಸಿದರು, ಸಂದರ್ಭದಲ್ಲಿ ಕೃಷಿ ಇಲಾಖೆಯ ನಿರ್ದೇಶಕರು, ಚಾಲನೆ ನೀಡಿ, ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೃಷಿ ಇಲಾಖೆಯ ನಿರ್ದೇಶಕರು,TC ಸರ್ IEC ಸಂಯೋಜಕರು, BFT,GKM,TRM,ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ,ಕಾಯಕ ಬಂಧುಗಳು ಹಾಗೂ ವರ್ಗದವರು ಉಪಸ್ಥಿತರಿದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!