Ad imageAd image

ಮತದಾನ ಜಾಗೃತಿ ಅಭಿಯಾನ ಜಿಲ್ಲಾ ಅಧಿಕಾರಿಗಳು ಆಲಮಟ್ಟಿ ಕಾರಂಜಿ ಬಳಿ ಸೇರಿದ್ದ ಜನರಿಗೆ ಮತ ಜಾಗೃತಿ ಕಾರ್ಯಕ್ರಮ

Bharath Vaibhav
WhatsApp Group Join Now
Telegram Group Join Now

ಆಲಮಟ್ಟಿ: –ಭಾನುವಾರ ರಜೆಯಲ್ಲಿ ಮಜಾ ಮಾಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿಯ ಸಂಗೀತ ಕಾರಂಜಿ ಬಳಿ ಸೇರಿದ್ದ ಸಾವಿರಾರು ಪ್ರವಾಸಿಗರಿಗೆ ಭಾನುವಾರ ರಾತ್ರಿ ಜಿಲ್ಲಾಡಳಿತ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮನ್ನು ಸ್ವಲ್ಪ ಸಮಯದಲ್ಲಿ ಆದರೂ ಕೂಡ ಅಚ್ಚುಕಟ್ಟಾಗಿ ಜಿಲ್ಲಾಧಿಕಾರಿಗಳು ಬಂದ ಪ್ರವಾಸಿಗರ ಮನಸ್ಸನ್ನು ಈ ಕಾರ್ಯಕ್ರಮದ ಗಮನ ಸೆಳೆದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಪ್ರವಾಸಿಗರ ಕುರಿತಾಗಿ ಮಾತನಾಡುತ್ತಾ ನಿಮ್ಮ ಒಂದು ಅಮೂಲ್ಯವಾದ ಸಮಯವನ್ನು ನಾವು ಹಾಳು ಮಾಡುವುದಿಲ್ಲ ಯಾವ ಒಬ್ಬ ವ್ಯಕ್ತಿಯು ಕೂಡ ಮತದಾನದಿಂದ ದೂರ ಉಳಿಯಬೇಡಿ ಕಡ್ಡಾಯವಾಗಿ ಮತವನ್ನು ಚಲಾಯಿಸಿ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಿಷಿ ಆನಂದ, ವಿಜಯಪುರ ಲೋಕಸಭಾ ಚುನಾವಣಾ ವೆಚ್ಚ ವಿಚಕ್ಷಣಾಧಿಕಾರಿ ಅನುಪಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ ಸೋನಾವಾಲೆ, ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ರಾಜಶೇಖರ ಪವಾರ, ಸಿ.ಆರ್. ಮುಂಡರಗಿ, ಬಿ.ಎಸ್. ಮೂಗನೂರಮಠ, ರಾಮಣ್ಣ ಮತ್ತಿತರರು ಇದ್ದರು. ಎಲ್ಲರೂ ಮತದಾನ ಮಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವರದಿ :ಅಲಿ ಮಕಾನದಾರ.

WhatsApp Group Join Now
Telegram Group Join Now
Share This Article
error: Content is protected !!