Ad imageAd image

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮತದಾನ ಜಾಗೃತಿ ಜಾಥಾ,ಮನೆ ಮನೆಗೆ ಕರಪತ್ರ ಹಂಚುವ ಅಭಿಯಾನ

Bharath Vaibhav
WhatsApp Group Join Now
Telegram Group Join Now

ಇಲಕಲ್ ;-ತಾಲೂಕು ನಗರಸಭೆ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮತದಾನ ಜಾಗೃತಿ ಜಾಥಾ ಹಾಗೂ ಮನೆ ಮನೆಗೆ ಕರಪತ್ರ ಹಂಚುವ ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿದರು.

ಈ ಜಾಥಾವೂ ನಗರಸಭೆ ಕಚೇರಿಯಿಂದ ನಗರದ ಸರ್ಕಲ್ ವರೆಗೂ ಜಾಥಾ ನಡೆಯಿತು. ಜೊತೆಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕರು ಸಾರ್ವಜನಿಕರಿಗೆ ಕರಪತ್ರ

ಹಂಚಿ ಮತದಾನ ಜಾಗೃತಿ ಮೂಡಿಸಿದರು. ಬಳಿಕ ಮಾನವ ಸರಪಳಿ ಮೂಲಕ ಮತದಾನ ಅರಿವು ಮೂಡಿಸಲಾಯಿತು. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗ ಇಲಾಖೆಯ ಸಹಾಯಕ ನಿರ್ದೇಶಕರು,ಅಧಿಕಾರಿಗಳು, ಐಇಸಿ ಸಂಯೋಜಕರು, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

ವರದಿ ದಾವಲ್. ಶೇಡಂ

WhatsApp Group Join Now
Telegram Group Join Now
Share This Article
error: Content is protected !!