Ad imageAd image

ಅಬ್ಬಬ್ಬಾ ಏನು ಬಿಸಿಲಿನ ತಾಪಮಾನಕ್ಕೆ ಜನ ಜಾನವಾರುಗಳು ತತ್ತರಿಸುತ್ತಿರುವ ಸಂದರ್ಭ.

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ :-ತಾಪಮಾನದ ವರದಿಯಂತೆ ಸುಮಾರು 40* ಕ್ಕೂ ಮೀರಿ ತಾಪಮಾನ ದಾಖಲಾಗುತ್ತಿದೆ, ಮಳೆಯ ಸುಳಿವೂ ಸಹ ಇತ್ತ ಕಡೆಗೆ ಇಲ್ಲ,

ಇಂತಹ ಪರಿಸ್ಥಿತಿಯಲ್ಲಿ ನಿಪ್ಪಾಣಿ ತಾಲೂಕಿನ, ಮಾಂಗೂರ ಗ್ರಾಮದ ರೈತರಾದ ಸ್ವಪ್ನಿಲ ಮತ್ತು ಸಂತೋಷ ಮಾನಕಾಪುರೆ ಇವರು, ದನ-ಕರಗಳ ಹಿತದೃಷ್ಟಿಯಿಂದ ಗೊಟಗಿಯಲ್ಲಿ ತಂಪು ನೀರಿನ ಶಾವರ ನಿರ್ಮಿಸಿ, ದನ-ಕರಗಳ ಮೇಲೆ ಹನಿ ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಶಾವರ ವ್ಯವಸ್ಥೆಯನ್ನು ನೋಡಲು ಬಹಳಷ್ಷು ಜನರು ಭೆಟ್ಟಿ ನೀಡಿ ಮಾನಕಾಪುರೆ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಮನುಷ್ಯ ತನಗಾಗಿ ಪಂಕಾ ಕೂಲರ ಏಸಿ ಅಂತಹ ತಂತ್ರಜ್ಞಾನಗಳನ್ನು ಬಳಸುತ್ತದೆ, ದನ-ಕರಗಳಿಗಾಗಿ ಶಾವರ ಬಳಸುತ್ತಿರುವ ಈ ರೈತರ ಕಾರ್ಯವನ್ನು ಆ ಭಗವಂತ ಮೆಚ್ಚಲೇ ಬೇಕೆಂದು, ಚಿಕ್ಕೋಡಿ ಪಟ್ಟಣದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಇವರು ಹಾರೈಸಿದ್ದಾರೆ.

ವರದಿ ರಾಜು ಮುಂಡೆ .

WhatsApp Group Join Now
Telegram Group Join Now
Share This Article
error: Content is protected !!