Ad imageAd image
- Advertisement -  - Advertisement -  - Advertisement - 

ದಾಸರಹಳ್ಳಿಯಲ್ಲಿ ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ಎಬಿಬಿ ಮಂಜುನಾಥ್ ನೇತೃತ್ವದಲ್ಲಿ ಮಹಿಳೆಯರ ಜಾಥಾ

Bharath Vaibhav
ದಾಸರಹಳ್ಳಿಯಲ್ಲಿ ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ಎಬಿಬಿ ಮಂಜುನಾಥ್ ನೇತೃತ್ವದಲ್ಲಿ ಮಹಿಳೆಯರ ಜಾಥಾ
WhatsApp Group Join Now
Telegram Group Join Now

ಬೆಂಗಳೂರು:- ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಮಹಿಳಾ ಸಮಾವೇಶ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಚಾಲನೆ ಕಾರ್ಯಕ್ರಮ ನಾಗಸಂದ್ರ ಮೆಟ್ರೋ ರೈಲು ಸ್ಟೇಷನ್ ಬಳಿ ಇರುವ ಮಾಜಿ ಶಾಸಕ ಆರ್ ಮಂಜುನಾಥ್ ಅವರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು.

ಮಹಿಳಾ ಸಮಾವೇಶದ ಪ್ರಯುಕ್ತ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ.ಎಬಿಬಿ ಮಂಜುನಾಥ್ (ಡಾ.ಎಬಿಬಿ ಮಂಜಣ್ಣ) ಅವರ ನೇತೃತ್ವದಲ್ಲಿ ಬಾಗಲಗುಂಟೆ ವಾರ್ಡಿನ ಮಂಜುನಾಥ್ ನಗರದಿಂದ ನೂರಾರು ಮಹಿಳೆಯರು ಕಾಲು ನಡಿಗೆಯಿಂದ ತಮ್ಮ ರಾಷ್ಟ್ರನಾಯಕರ ಮತ್ತು ರಾಜ್ಯ ನಾಯಕರ ಘೋಷಣೆ ಕೂಗುತ್ತಾ ಸಮಾವೇಶಕ್ಕೆ ಕರೆದೊಯ್ಯಲಾಯಿತು.

ಮಹಿಳಾ ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ನಂತರ ಹೊತ್ತು ವರ್ಷದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತ ಮತ್ತು ರಾಜ್ಯದ 26ಜನ ಬಿಜೆಪಿಯ ಲೋಕಸಭಾ ಸದಸ್ಯ ಇದ್ದರು ತಮ್ಮ ತಮ ಕ್ಷೇತ್ರ ಮಾಡಿದ ಧೋರಣೆಗಳ ಬಗ್ಗೆ ಕೂಲಂಕುಶವಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಕ್ಷೇತ್ರದ ಮಾಜಿ ಶಾಸಕ ಆರ್.ಮಂಜುನಾಥ್, ಬೆಂಗಳೂರು ಉತ್ತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಗೌಡ್ರು,ಮಾಜಿ ಪಾಲಿಕೆ ಸದಸ್ಯ ಕೆ.ನಾಗಭೂಷಣ್, ಜಿಲ್ಲಾ ಅಧ್ಯಕ್ಷ ವಾಜೀದ್, ಮಾಜಿ ನಗರಸಭಾ ಅಧ್ಯಕ್ಷ ಕೆ.ಸಿ ಅಶೋಕ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಾಸ್ಕರ್ ಆಚಾರಿ, ಮಹಿಳಾ ಮುಖ್ಯಸ್ಥೆ ಅನುಸೂಯ, ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!