ಹುಕ್ಕೇರಿ:- ಶ್ರೀ ದುರ್ಗಾದೇವಿ ಪಾರಾಯಣ ಮಾಡುವ ಭಕ್ತರಿಗೆ ಉಪದೇಶವನ್ನು ನೀಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ದುರ್ಗಾ ಮಾತೆಯ ಪಾರಾಯಣ ಉಪದೇಶವನ್ನು ಭಕ್ತಿ ಭಾವನೆಯಿಂದ ಕಾರ್ಯಕ್ರಮ ನಡೆಸಲಾಯಿತು ಶ್ರೀ ಷ. ಬ್ರ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಗಳ ಹಿರೇಮಠ ಹುಕ್ಕೇರಿ ಇವರ ನೇತೃತ್ವದಲ್ಲಿ ದಸರಾ ಉತ್ಸವ ಅಕ್ಟೋಬರ್ 3 ರಿಂದ ದಿನಾಂಕ 12 ರವರಗೆ 9 ದಿವಸ ದಿನನಿತ್ಯ ಕಾರ್ಯಕ್ರಮ ನಡೆಸಲಾಗುವುದು.
ದಸರಾ ಉತ್ಸವ ಉದ್ಘಾಟನೆ ಗುರುಶಾಂತೇಶ್ವರರಿಗೆ ರುದ್ರಾಭಿಷೇಕ ಶ್ರೀದೇವಿ ಪುರಾಣ ಪಾರಾಯಣ, ಚಂಡಿಕಾ ಹೋಮ, ಶ್ರೀಗಳ ಪಾದಪೂಜೆ, ಪುರಾಣ ವಚನ, ಶ್ರೀ ಚಕ್ರಕ್ಕೆ ಕುಂಕುಮಾರ್ಚನೆ ಗುರುಶಾಂತೇಶ್ವರ ರಥೋತ್ಸವ ಶ್ರೀದೇವಿ ಪಲ್ಲಕ್ಕಿ ಉತ್ಸವ, ಪೇಟೆ ಕಾರಂಜಿಗೆ ಗಂಗಾರತಿ ಹುಕ್ಕೇರಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುವುದು.
ಈ ಸಂದರ್ಭದಲ್ಲಿ,ಪುರೋಹಿತ್ಯ ಶ್ರೀ ವಿದ್ವಾನ್ ಸಂಪತ್ ಕುಮಾರ್ ಶಾಸ್ತ್ರಿಗಳು, ವಿದ್ವಾನ್ ಶ್ರೀ ಚಂದ್ರಶೇಖರ್ ಶಾಸ್ತ್ರಿಗಳು, ಶ್ರೀ ದಿವಾಕರ್ ಭಟ್ಟರು, ಶ್ರೀ ಉದಯ ಶಾಸ್ತ್ರಿಗಳು, ಶ್ರೀ ಪ್ರಸಾದ ಶಾಸ್ತ್ರಿಗಳು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ