Ad imageAd image

ಶಿಕ್ಷಕ ಬೈದಿದಕ್ಕೆ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ 

Bharath Vaibhav
ಶಿಕ್ಷಕ ಬೈದಿದಕ್ಕೆ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ 
WhatsApp Group Join Now
Telegram Group Join Now

ಮಹಾರಾಷ್ಟ್ರ : ಓದದಿದ್ದರೆ ಪೋಷಕರ ಬಳಿ ಹೇಳುತ್ತೇನೆ ಎಂದು ಶಿಕ್ಷಕನೋರ್ವ ಹೇಳಿದ್ದಕ್ಕೆ 10 ನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ವಿವೇಕ್ ಮಹದೇವ್ ರಾವುತ್ ಎಂದು ಗುರುತಿಸಲಾಗಿದೆ.ವಿವೇಕ್ ಮಹಾರಾಷ್ಟ್ರದ ಅಮರಾವತಿಯ ಜೈ ಭಜರಂಗ್ ವಿದ್ಯಾಲಯದಲ್ಲಿ 10 ನೇ ತರಗತಿ ಓದುತ್ತಿದ್ದ. ತರಗತಿಯಲ್ಲಿ ಸೂರ್ಯವಂಶಿ ಎಂಬ ಶಿಕ್ಷಕ ಪಠ್ಯಕ್ಕೆ ಸಂಬಂಧಪಟ್ಟಂತೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಶಿಕ್ಷಕ ಕೇಳಿದ ಯಾವ ಪ್ರಶ್ನೆಗೂ ವಿವೇಕ್ ಉತ್ತರಿಸದಿದ್ದಾಗ ನಿನ್ನ ಪೋಷಕರ ಬಳಿ ನೀನು ಸ್ವಲ್ಪ ಕೂಡ ಓದುವುದಿಲ್ಲ ಎಂದು ಹೇಳುತ್ತೇನೆ ಎಂದು ಬೈದಿದ್ದಾರೆ. ತರಗತಿಯ ಬಳಿಕ ಸಹಪಾಠಿಗಳು ವಿವೇಕ್ ಗೆ ತಮಾಷೆ ಮಾಡಿದ್ದಾರೆ.

ಮೊದಲೇ ಶಿಕ್ಷಕನ ಮಾತನ್ನು ಕೇಳಿ ಮನನೊಂದಿದ್ದ ವಿವೇಕ್ ಇದೀಗ ಸಹಪಾಠಿಗಳು ಕೂಡ ನನ್ನನ್ನು ಅವಮನಿಸುತ್ತಿದ್ದಾರೆ ಎಂದು ಮನೆಗೆ ಹೋಗಿ ನಾನು ನೇಣು ಬಿಗಿದುಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಸೂರ್ಯವಂಶಿ ಟೀಚರ್ ನನಗೆ ಬೈದಿದ್ದಾರೆ, ಹಾಗೂ ಪೋಷಕರ ಬಗ್ಗೆ ಮಾತನಾಡಿದ್ದಾರೆ. ಇದರಿಂದ ನನಗೆ ನೋವಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ ಪೋಷಕರು ಮಗ ಎಲ್ಲಿ ಎಂದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಡೆತ್ ನೋಟ್ ಪೋಷಕರಿಗೆ ಸಿಕ್ಕಿದ್ದು, ಮಗನ ಸಾವಿನ ಸಿಟ್ಟಿನಲ್ಲಿ ನೆರೆಹೊರೆಯವರ ಜೊತೆ ಶಿಕ್ಷಕ ಸೂರ್ಯವಂಶಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇತ್ತ ಶಿಕ್ಷಕ ಸೂರ್ಯವಂಶಿ ವಿರುದ್ಧ ದೂರು ದಾಖಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿ ತ್ಸೆ ಪಡೆಯುತ್ತಿದ್ದಾರೆ.

ವಿವೇಕ್ ಮಹಾರಾಷ್ಟ್ರದ ಅಮರಾವತಿಯ ಜೈ ಭಜರಂಗ್ ವಿದ್ಯಾಲಯದಲ್ಲಿ 10 ನೇ ತರಗತಿ ಓದುತ್ತಿದ್ದ. ತರಗತಿಯಲ್ಲಿ ಸೂರ್ಯವಂಶಿ ಎಂಬ ಶಿಕ್ಷಕ ಪಠ್ಯಕ್ಕೆ ಸಂಬಂಧಪಟ್ಟಂತೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಶಿಕ್ಷಕ ಕೇಳಿದ ಯಾವ ಪ್ರಶ್ನೆಗೂ ವಿವೇಕ್ ಉತ್ತರಿಸದಿದ್ದಾಗ ನಿನ್ನ ಪೋಷಕರ ಬಳಿ ನೀನು ಸ್ವಲ್ಪ ಕೂಡ ಓದುವುದಿಲ್ಲ ಎಂದು ಹೇಳುತ್ತೇನೆ ಎಂದು ಬೈದಿದ್ದಾರೆ. ತರಗತಿಯ ಬಳಿಕ ಸಹಪಾಠಿಗಳು ವಿವೇಕ್ ಗೆ ತಮಾಷೆ ಮಾಡಿದ್ದಾರೆ.

ಮೊದಲೇ ಶಿಕ್ಷಕನ ಮಾತನ್ನು ಕೇಳಿ ಮನನೊಂದಿದ್ದ ವಿವೇಕ್ ಇದೀಗ ಸಹಪಾಠಿಗಳು ಕೂಡ ನನ್ನನ್ನು ಅವಮನಿಸುತ್ತಿದ್ದಾರೆ ಎಂದು ಮನೆಗೆ ಹೋಗಿ ನಾನು ನೇಣು ಬಿಗಿದುಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಸೂರ್ಯವಂಶಿ ಟೀಚರ್ ನನಗೆ ಬೈದಿದ್ದಾರೆ, ಹಾಗೂ ಪೋಷಕರ ಬಗ್ಗೆ ಮಾತನಾಡಿದ್ದಾರೆ. ಇದರಿಂದ ನನಗೆ ನೋವಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ ಪೋಷಕರು ಮಗ ಎಲ್ಲಿ ಎಂದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಡೆತ್ ನೋಟ್ ಪೋಷಕರಿಗೆ ಸಿಕ್ಕಿದ್ದು, ಮಗನ ಸಾವಿನ ಸಿಟ್ಟಿನಲ್ಲಿ ನೆರೆಹೊರೆಯವರ ಜೊತೆ ಶಿಕ್ಷಕ ಸೂರ್ಯವಂಶಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇತ್ತ ಶಿಕ್ಷಕ ಸೂರ್ಯವಂಶಿ ವಿರುದ್ಧ ದೂರು ದಾಖಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!