ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಅಂಬಟಿ ರಾಯುಡು ಅವರೊಂದಿಗೆ ಆಡಿದ್ದ ಅನುಭವಿ ಆಲ್ರೌಂಡರ್ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ರಾಜೇಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.ಪ್ರಾಥಮಿಕ ಪರೀಕ್ಷೆಯ ನಂತರ ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ರಾಜೇಶ್ ಬಾನಿಕ್ ಅವರ ನಿಧನಕ್ಕೆ ತ್ರಿಪುರ ಕ್ರಿಕೆಟ್ ಅಕಾಡೆಮಿ ಸಂತಾಪ ಸೂಚಿಸಿದೆ. ಟಿಸಿಎ ಕಾರ್ಯದರ್ಶಿ ಸುಬ್ರತಾ ಡೇ, “ನಾವು ಒಬ್ಬ ಪ್ರತಿಭಾನ್ವಿತ ಕ್ರಿಕೆಟಿಗ ಮತ್ತು ಅಂಡರ್ -16 ಕ್ರಿಕೆಟ್ ತಂಡದ ಆಯ್ಕೆದಾರರನ್ನು ಕಳೆದುಕೊಂಡಿರುವುದು ತುಂಬಾ ದುರದೃಷ್ಟಕರ. ಈ ಘಟನೆಯಿಂದ ನಮಗೆ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದರು.




