Ad imageAd image

ನಾಯಿ ಕಚ್ಚಿದ ನಂತರ ರೇಬೀಸ್ ರೋಗ ಬರಬಹುದು ಎಂದು ಯುವಕ ಆತ್ಮಹತ್ಯೆ 

Bharath Vaibhav
ನಾಯಿ ಕಚ್ಚಿದ ನಂತರ ರೇಬೀಸ್ ರೋಗ ಬರಬಹುದು ಎಂದು ಯುವಕ ಆತ್ಮಹತ್ಯೆ 
WhatsApp Group Join Now
Telegram Group Join Now

ಮುಂಬೈ: ಮಹಾರಾಷ್ಟ್ರದ ಕಲ್ಯಾಣ್‌’ನಲ್ಲಿ 30 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರು ಬೀದಿನಾಯಿ ಕಚ್ಚಿದ ನಂತರ ತಮಗೆ ‘ರೇಬಿಸ್’ (Rabies) ರೋಗ ತಗುಲಬಹುದೆಂಬ ವಿಪರೀತ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಅಯಾಸ್ ವಿಶ್ವನಾಥ್ ಅಮಿನ್ ಎಂದು ಗುರುತಿಸಲಾಗಿದ್ದು, ಇವರು ಕಲ್ಯಾಣ್ ಪೂರ್ವದ ತಿಸ್ಗಾಂವ್ ನಾಕಾ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಇವರು ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕ್ನ ಥಾಣೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳ ಹಿಂದೆ ಅಯಾಸ್ ಅವರಿಗೆ ಬೀದಿನಾಯಿಯೊಂದು ಕಚ್ಚಿತ್ತು. ವರದಿಗಳ ಪ್ರಕಾರ ಅವರು ರೇಬಿಸ್ ವಿರೋಧಿ ಲಸಿಕೆ (Anti-rabies vaccination) ಪಡೆಯಲು ಪ್ರಾರಂಭಿಸಿದ್ದರು.

ಆದರೆ ಇತ್ತೀಚೆಗೆ ಅವರು ತೀವ್ರ ಆತಂಕಕ್ಕೆ ಒಳಗಾಗಿದ್ದರು ಮತ್ತು ವೈರಸ್ ಸೋಂಕಿನ ಲಕ್ಷಣಗಳು ತಮಗೆ ಕಾಣಿಸಿಕೊಳ್ಳುತ್ತಿವೆ ಎಂದು ನಂಬಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಸ್ಥಳದಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರದಲ್ಲಿ ಈ ರೋಗದ ಭಯವೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ವರದಿಯ ಪ್ರಕಾರ, ನಾಯಿ ಕಚ್ಚಿದ ನಂತರ ಅಮಿನ್ ಕೇವಲ ಒಂದು ರೇಬಿಸ್ ವಿರೋಧಿ ಇಂಜೆಕ್ಷನ್ ಪಡೆದಿದ್ದರು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಆದರೆ ನಂತರ ಅವರ ನಡವಳಿಕೆಯಲ್ಲಿ ಅಸಹಜ ಬದಲಾವಣೆಗಳು ಕಂಡುಬಂದವು ಮತ್ತು ತಮ್ಮ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಯಿತು ಎಂದು ಹೇಳಿದ್ದಾರೆ.ಸದ್ಯ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!