Ad imageAd image

ಕರ್ನಾಟಕ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಾಗಿ ಪದೋನ್ನತಿ : ಸುಪ್ರೀಂ ಕೋರ್ಟ್ ಅಸ್ತು

Bharath Vaibhav
ಕರ್ನಾಟಕ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಾಗಿ ಪದೋನ್ನತಿ : ಸುಪ್ರೀಂ ಕೋರ್ಟ್ ಅಸ್ತು
LAW
WhatsApp Group Join Now
Telegram Group Join Now

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಪದೋನ್ನತಿ ಮಾಡುವ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಸ್ತು ಎಂದಿದೆ.

ಏಪ್ರಿಲ್ 14, 2026 ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೂವರು ಅಧಿಕಾರಿಗಳನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳು:

ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಲು ಶಿಫಾರಸು ಮಾಡಲ್ಪಟ್ಟ ಅಧಿಕಾರಿಗಳ ವಿವರ ಈ ಕೆಳಗಿನಂತಿದೆ:

ಶ್ರೀಮತಿ ರಾಜೇಶ್ವರಿ ನಾರಾಯಣ ಹೆಗಡೆ

ಶ್ರೀಮತಿ ಕೆದಂಬಾಡಿ ಗಣೇಶ್ ಶಾಂತಿ

ಶ್ರೀ ಮಹದೇವಪ್ಪ ಬೃಂಗೇಶ್

ರಾಜ್ಯದ ಉನ್ನತ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಪೂರಕವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕೊಲಿಜಿಯಂನ ಈ ಶಿಫಾರಸನ್ನು ಈಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುವುದು. ಅಲ್ಲಿಂದ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಅಧಿಕೃತವಾಗಿ ನೇಮಕಾತಿ ಆದೇಶ ಹೊರಬೀಳಲಿದೆ.

ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ಮಹಿಳಾ ನ್ಯಾಯಾಂಗ ಅಧಿಕಾರಿಗಳು ಶಿಫಾರಸುಗೊಂಡಿರುವುದು ಈ ನೇಮಕಾತಿಯ ವಿಶೇಷತೆಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!