Ad imageAd image

ಜೀವನದ ಸತ್ಯ ಗೊತ್ತಿಲ್ಲದೆ ವಿನಾಕಾರಣ ನನ್ನನ್ನು ದೂಷಿಸಿದರು : ನಟ ದರ್ಶನ್ ಗೆಳತಿ ಭಾವುಕ

Bharath Vaibhav
ಜೀವನದ ಸತ್ಯ ಗೊತ್ತಿಲ್ಲದೆ ವಿನಾಕಾರಣ ನನ್ನನ್ನು ದೂಷಿಸಿದರು : ನಟ ದರ್ಶನ್ ಗೆಳತಿ ಭಾವುಕ
WhatsApp Group Join Now
Telegram Group Join Now

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ಪವಿತ್ರಾ ಗೌಡ ಅವರ ಜೀವನ ಸಂಪೂರ್ಣವಾಗಿ ಬದಲಾಗಿದೆ. ಒಂದು ಕಾಲದಲ್ಲಿ ರಾಣಿಯಂತೆ ಜೀವನ ನಡೆಸಿದ್ದ ಪವಿತ್ರಾ, ಈಗ ಸಮಾಜದ ಕಣ್ಣಿನಲ್ಲಿ ಖಳನಾಯಕಿಯಾಗಿ ಬಿಂಬಿತರಾಗಿದ್ದಾರೆ

ಈ ಪ್ರಕರಣದಿಂದಾಗಿ ಅವರ ಜೀವನದಲ್ಲಿ ಉಂಟಾದ ಗೊಂದಲ, ಕುಟುಂಬದ ಒಡಕು, ಮತ್ತು ಸಮಾಜದ ಟೀಕೆಗಳು ಅವರನ್ನು ತೀವ್ರವಾಗಿ ನೋವುಂಟುಮಾಡಿದೆ

ಈ ಎಲ್ಲ ಆರೋಪಗಳ ಮಧ್ಯೆ ಪವಿತ್ರಾ ಗೌಡ ಮೌನವಾಗಿದ್ದರು. ಆದರೆ ಇದೀಗ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಒಂದು ಸ್ಟೋರಿಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ

ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಖ್ಯಾತ ವಿಮರ್ಶಕಿ ಎಂಎಸ್ ಆಶಾದೇವಿ ಅವರು ಮಾಡಿದ ಭಾಷಣದ ಒಂದು ತುಣುಕನ್ನು ಪವಿತ್ರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಶಾದೇವಿ, ಸಮಾಜದಲ್ಲಿ ಮಹಿಳೆಯರನ್ನು ಲಘುವಾಗಿ ಪರಿಗಣಿಸುವ ಮತ್ತು ಸುಲಭವಾಗಿ ನಿಂದಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪವಿತ್ರಾ ಗೌಡ ಅವರ ಪ್ರಕರಣವನ್ನು ಉದಾಹರಣೆಯಾಗಿ ಉಲ್ಲೇಖಿಸಿ, ‘ಯಾರದ್ದೇ ಖಾಸಗಿ ಜೀವನವಾಗಿರಲಿ, ಆಕೆ ನಟಿಯಾಗಿರಲಿ, ಯಾರನ್ನಾದರೂ ಮದುವೆಯಾಗಿರಲಿ, ಅದು ನಮಗೆ ಸಂಬಂಧಿಸಿದ ವಿಷಯವಲ್ಲ.

ನಾವು ಮೂಗು ತೂರಿಸಬೇಕಾದ ವಿಷಯವೂ ಅಲ್ಲ. ‘ಪವಿತ್ರಾ’ ಎಂಬ ಹೆಣ್ಣಿನ ಬಗ್ಗೆ ‘ಅಪವಿತ್ರ’ ಎಂದು ಕರೆಯುವುದು ಮಹಿಳೆಯ ಬಗ್ಗೆ ಬಳಸಬಹುದಾದ ಪದವೇ? ಇಂತಹ ಪದವನ್ನು ಬಳಸಲು ಮಾಧ್ಯಮಕ್ಕೆ ಯಾವ ಹಕ್ಕಿದೆ?’ ಎಂದು ಆಶಾದೇವಿ ಪ್ರಶ್ನಿಸಿದ್ದಾರೆ

ಈ ವಿಡಿಯೋ ತುಣುಕನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪವಿತ್ರಾ ಗೌಡ, ‘ನನ್ನ ಜೀವನದ ಸತ್ಯ ಗೊತ್ತಿಲ್ಲದೆ ಬಹಳಷ್ಟು ಜನ ವಿನಾಕಾರಣ ನನ್ನನ್ನು ದೂಷಿಸಿದರು.

ಇಂತಹ ಸಮಾಜದಲ್ಲಿ ನಿಮ್ಮ ಈ ಮಾತುಗಳು ನನ್ನಲ್ಲಿ ಸಣ್ಣ ಭರವಸೆಯನ್ನು ಚಿಗುರಿಸಿವೆ. ನನ್ನ ಕಡೆಯಿಂದ ಅನಂತ ಧನ್ಯವಾದಗಳು. ನನ್ನ ಜೀವನದ ಸತ್ಯಾಸತ್ಯತೆಗಳನ್ನು ಅರಿಯದೆ ಕೆಟ್ಟದಾಗಿ ಮಾತನಾಡುವ ಈ ಸಮಾಜದಲ್ಲಿ ನಿಮ್ಮಂತಹವರು ಇರುವುದು ವಿಶೇಷ’ ಎಂದು ಬರೆದಿದ್ದಾರೆ.

‘ನಮ್ಮ ಸಮಾಜ ಮತ್ತು ಮಾಧ್ಯಮಗಳು ಕನಿಷ್ಠ ಕಷ್ಟದಲ್ಲಿರುವ ಮಹಿಳೆಯ ಬಗ್ಗೆ ಗೌರವದಿಂದ ನಡೆದುಕೊಳ್ಳಲಿ ಎಂಬುದು ನನ್ನ ಆಶಯ. ನನ್ನ ಜೀವನದ ನಿಜವಾದ ಕಷ್ಟಗಳು ಕೇವಲ ನನಗೆ ಮತ್ತು ನನ್ನ ಹತ್ತಿರದವರಿಗೆ ಮಾತ್ರ ಗೊತ್ತು. ನಿಮ್ಮ ಮಾತುಗಳಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಅವರು ತಿಳಿಸಿದ್ದಾರೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ಜೈಲು ಸೇರಿದ್ದ ಅವರು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್‌ಗೆ ಸ್ವಲ್ಪ ಸಹಾನುಭೂತಿ ಸಿಕ್ಕಿದ್ದರೂ, ಪವಿತ್ರಾ ಗೌಡಗೆ ಆ ರೀತಿಯ ಸಹಾನುಭೂತಿ ದೊರೆತಿಲ್ಲ. ಕೆಲವು ದರ್ಶನ್ ಅಭಿಮಾನಿಗಳು ಪವಿತ್ರಾರನ್ನು ದರ್ಶನ್ ಜೀವನದ ಖಳನಾಯಕಿಯಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ, ಆಶಾದೇವಿಯವರ ಮಾತುಗಳು ಪವಿತ್ರಾ ಗೌಡಗೆ ಒಂದಿಷ್ಟು ಧೈರ್ಯ ತುಂಬಿವೆ. ಸಮಾಜದ ತೀರ್ಪಿಗೆ ಒಳಗಾಗದೆ, ತಮ್ಮ ಜೀವನದ ಸತ್ಯವನ್ನು ಸಮರ್ಥಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾ

 

ರೆ……

WhatsApp Group Join Now
Telegram Group Join Now
Share This Article
error: Content is protected !!