ನವದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆಯು ವೇಗ ಪಡೆದುಕೊಂಡಿತು, ಏಕೆಂದರೆ ಐಪಿಎಲ್ ತಂಡಕ್ಕಾಗಿ “ಬಲವಾದ ಮತ್ತು ಸ್ಪರ್ಧಾತ್ಮಕ” ಬಿಡ್ ಸಲ್ಲಿಸುವುದಾಗಿ ಆದರ್ ಪೂನವಲ್ಲಾ ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಹಾಲಿ ಐಪಿಎಲ್ ಚಾಂಪಿಯನ್ ಆಗಿದ್ದು, ಲೀಗ್’ನಲ್ಲಿರುವ 10 ತಂಡಗಳಲ್ಲಿ ಅತಿ ದೊಡ್ಡ ಅಭಿಮಾನಿಗಳನ್ನ ಹೊಂದಿದೆ.
“ಮುಂದಿನ ಕೆಲವು ತಿಂಗಳುಗಳಲ್ಲಿ, ಐಪಿಎಲ್’ನ ಅತ್ಯುತ್ತಮ ತಂಡಗಳಲ್ಲಿ ಒಂದಾದ ಆರ್‌ಸಿಬಿಗಾಗಿ ಬಲವಾದ ಮತ್ತು ಸ್ಪರ್ಧಾತ್ಮಕ ಬಿಡ್ ಸಲ್ಲಿಸಲಿದೆ” ಎಂದು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂನವಲ್ಲಾ ತಮ್ಮ ಅಧಿಕೃತ ‘ಎಕ್ಸ್’ ಹ್ಯಾಂಡಲ್’ನಲ್ಲಿ ಬರೆದಿದ್ದಾರೆ.




