ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಕಂಪ್ಲೇಂಟ್ ಕೊಟ್ಟಿದ್ದಾರೆ.
ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟ ನಿರ್ದೇಶಕ ನಾಗಶೇಖರ್, ರಮ್ಯಾ, ತಮನ್ನಾ ಎಲ್ಲರಿಗೂ ನಾನು ಸಿನಿಮಾ ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದಿದ್ದಾರೆ.
ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್ ಬಂದಿಲ್ಲ. ಹೀಗಾಗಿ ರಚಿತಾ ರಾಮ್ ವಿರುದ್ಧ ನಿರ್ದೇಶಕರು ತಿರುಗಿ ಬಿದ್ದಿದ್ದಾರೆ.
ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್‌ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದ್ರು. ಆದರೂ ರಚಿತಾ ಒಪ್ಪಿಲ್ಲ. ನಾವು ಇಂತಹ ಕಲಾವಿದರಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ
ಸಿನಿಮಾಗೆ ಇಷ್ಟು ದಿನ ಪ್ರದರ್ಶನ ಕಂಡಿದೆ. ಆದರೆ, ಸಿನಿಮಾದ ನಾಯಕನಟಿಯಾಗಿ ಆಕೆ ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥ ನಟರುಗಳೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ.
ಆದರೆ, ರಚಿತಾ ರಾಮ್‌ಗೆ ದೊಡ್ಡ ಪ್ರಮಾಣದಲ್ಲಿ ಪೇಮೆಂಟ್ ಕೊಟ್ಟಿದ್ದರೂ ಸಿನಿಮಾಗೆ ಬೆಂಬಲ ಕೊಟ್ಟಿಲ್ಲ ಎಂದು ನಾಗಶೇಖರ್ ಗರಂ ಆಗಿದ್ದಾರೆ.