ಬೆಂಗಳೂರು : ನಮ್ರತಾ ಗೌಡಗೆ ರಾಜಕಾರಣಿಗಳ ಪರಿಚಯವಿದೆ ಎಂದು ವ್ಯಕ್ತಿಯೊಬ್ಬ ಡೇಟಿಂಗ್ ಗಾಗಿ ಆಫರ್ ನೀಡಿದ್ದಾನೆ. ಈ ಅಸಭ್ಯ ಮೆಸೇಜ್ ವಿರುದ್ಧ ನಮ್ರತಾ ಬೇಸರಗೊಂಡಿದ್ದಾರೆ.
ನಟಿ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ರೀಲ್ಸ್ ಮತ್ತು ಹೊಸ ಹೊಸ ಫೋಟೋಶೂಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ನಮ್ರತಾ ಗೌಡ ಇದೀಗ ಒಂದು ಸ್ಕ್ರೀನ್ಶಾಟ್ನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ನಾನು ಕೆಲವು ರಾಜಕಾರಣಿಗಳು ಮತ್ತು ವಿಐಪಿಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ. ಅವರೊಂದಿಗೆ ಪೇಯ್ಡ್ ಡೇಟಿಂಗ್ ವ್ಯವಸ್ಥೆ ಮಾಡುತ್ತೇನೆ.
ಇದು ಯಾರಿಗೂ ಗೊತ್ತಾಗುವುದಿಲ್ಲ. ನಿಮ್ಮ ವೈಯಕ್ತಿಕ ಸಂಖ್ಯೆ ಅಥವಾ ಫೋಟೋಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ. ಹೆಚ್ಚಿನ ಮೊತ್ತವನ್ನು ಪಾವತಿಸಲಾಗುವುದು.
ನಿಮಗೆ ಆಸಕ್ತಿ ಇದ್ದರೆ 200% ಖಾಸಗಿಯಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಡಿಎಂ ಮಾಡಿ ಎಂದು ರೋಷನ್ ಎಂಬ ವ್ಯಕ್ತಿ ನಮ್ರತಾ ಗೌಡಗೆ ಮೆಸೇಜ್ ಮಾಡಿದ್ದಾನೆ.
ನಮ್ರತಾ ಗೌಡ ಕೂಡ ಧೈರ್ಯವಾಗಿ ರೋಷನ್ನ ಬಣ್ಣ ಬಯಲು ಮಾಡಿದ್ದಾರೆ. ‘ಮಿಸ್ಟರ್ ರೋಷನ್ ಇದನ್ನು ಇಲ್ಲಿಗೆ ನಿಲ್ಲಿಸಿ’ ಎಂದು ಸ್ಕ್ರೀನ್‌ಶಾಟ್ ಹಂಚಿಕೊಂಡು ಕಿಡಿಕಾರಿದ್ದಾರೆ.