ರಾಯಚೂರು:- ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆ,ಗೃಹ ಸಚಿವ ಜಿ.ಪರಮೇಶ್ವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ವಿಚಾರ ರನ್ಯಾ ರಾವ್ ಪ್ರಕರಣ ಒಂದು ಕಡೆ ಡಿಫರೆಂಟ್ ಇದೆ.ಪರಮೇಶ್ವರ ಅವರು ಯಾಕೆ ಹಣ ಕೊಟ್ಟಿದ್ದೇನೆ ಅಂತ ಇಡಿಗೆ, ತನಿಖೆಯಲ್ಲಿ ಹೇಳಬೇಕಿದೆ.ಅವರ ಸಂಸ್ಥೆಗಳಲ್ಲಿ ನಡೆದ ಚಟುವಟಿಕೆ ವಿಚಾರ ಇದು
ಸಂದರ್ಭ ಬಂದಾಗ ಇಡಿಗೆ ಪರಮೇಶ್ವರ್ ಅವರು ಉತ್ತರ ಕೊಡ್ತಾರೆ.ನ್ಯಾಷನಲ್ ಹೆರಾಲ್ಡ್ ಗೆ ಡಿಕೆಶಿ ಬ್ರದರ್ಸ್ ದೇಣಿಗೆ ವಿಚಾರ ದೇಣಿಗೆ ನೀಡಲು ಎಲ್ಲರಿಗೂ ಹಕ್ಕು ಇದೆ.ಆದ್ರೂ ಆರೋಪಗಳನ್ನ ಹೊತ್ತ ಸಂಸ್ಥೆಗೆ ದೇಣಿಗೆ ನೀಡಿದ್ದಾರೆ.ಸತತವಾಗಿ ಹಣ ದುರ್ಬಳಕೆ ಅಲ್ಲಿ ನಡೆದಿದೆ ಅನ್ನೋದು ಖಾತ್ರಿಯಾಗಿದೆ,ತನಿಖೆನೂ ನಡಿತಿದೆ.ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು
ಆದ್ರೆ ಡಿ ಕೆ ಶಿವಕುಮಾರ್ ಕೊಟ್ಟಿರುವುದು ಲೀಗಲ್ ಆಗಿ ಅವರ ಟ್ರಸ್ಟ್ ನಿಂದ ಕೊಟ್ಟಿರೋದಾಗಿ ಹೇಳ್ತಿದ್ದಾರೆ.ಇಡಿ ಅದರ ತನಿಖೆಯನ್ನ ನಡೆಸಲಿ.ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ರಾಯಭಾರಿ ವಿಚಾರ ಕನ್ನಡಿಗರಿಗೆ ಕೊಟ್ಟಿದ್ದರೆ ಒಳ್ಳೆಯದಿತ್ತು ಅನ್ನೋದು ನನ್ನ ಭಾವನೆ,
ನಮ್ಮಲ್ಲೇ ಅಂತರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿಕೊಂಡ ಒಳ್ಳೆಯ ಕಲಾವಿದರಿದ್ದಾರೆ.ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಸೇರಿ ಹಲವಾರು ಜನ ಇದ್ದಾರೆ.ಮತ್ತೊಂದು ರಾಜ್ಯದ ಹೆಣ್ಣುಮಗಳು ಬಂದು ನಮ್ಮ ಬ್ರ್ಯಾಂಡ್ ಪ್ರೊಜೆಕ್ಟ್ ಮಾಡಿದ್ರೆ ಲಾಭ ಆಗುತ್ತೆ ಅಂದ್ರೆ ಆಗಲಿ
ಮೈಸೂರು ಸ್ಯಾಂಡಲ್ ಈಗ ಇಂಟರ್ ನ್ಯಾಶನಲ್ ಬ್ರ್ಯಾಂಡ್,
ಹೊರದೇಶಗಳ ನುಸುಳುಕೋರರು ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿದ್ದಾರೆ.ಬಾಂಗ್ಲಾ ನುಸುಳುಕೋರರು ನಮ್ಮ ರೈತರ ಬಡವರ ಕೆಲಸಗಳನ್ನ ಕಸಿದುಕೊಂಡಿದ್ದಾರೆ
ನಕಲಿ ದಾಖಲೆಗಳನ್ನ ಸೃಷ್ಟಿಸಿಕೊಂಡು ರಾಜ್ಯದಲ್ಲಿ ಸುಮಾರು 2 ಲಕ್ಷ ಜನ ವಾಸಿಸುತ್ತಿದ್ದಾರೆ.36 ಸಾವಿರ ನುಸುಳುಕೋರರ ಬಗ್ಗೆ ಜನಸಾಮಾನ್ಯರು ಮಾಹಿತಿ ಕೊಟ್ಟಿದ್ದಾರೆ.ಗ್ರಡ್ಸ್ ಪೆಡ್ಲರ್, ಕ್ರಿಮಿನಲ್ ಚಟುವಟಿಕೆಗಳು, ಅಪಾರ್ಟ್‌ಮೆಂಟ್ , ಬ್ಯೂಟಿ ಪಾರ್ಲರ್‌ಗಳಲ್ಲಿ ನುಸುಳುಕೋರರು ಕೆಲಸ ಮಾಡುತ್ತಿದ್ದಾರೆ.ಅಕ್ರಮ ನುಸುಳುಕೋರರಿಗೆ ಮೂರು ವರ್ಷದ ಶಿಕ್ಷೆಯನ್ನ 10 ವರ್ಷ ಮಾಡಬೇಕು ಅಂತ ಒತ್ತಾಯ
ವರದಿ-ಗಾರಲ ದಿನ್ನಿ ವೀರನ ಗೌಡ